
ಶಿವಮೊಗ್ಗ: ಇತ್ತೀಚಿನ ದಿನಗಳಲ್ಲೂ ನದಿ, ಹಳ್ಳಗಳನ್ನು ದಾಟಲು ಕಾಲು ಸಂಕವನ್ನು ಬಳಸುತ್ತಿರುವುದು ಆಶ್ಚರ್ಯವಾಗುತ್ತದೆ. ಕಾಲು ಸಂಕವನ್ನು ಅಡಿಕೆ ದಬ್ಬೆ ಹಾಗೂ ಮರದ ಕೋಲುಗಳನ್ನು ಬಳಸಿ ನಿರ್ಮಿಸುಲಾಗುತ್ತದೆ. ಜನರು ಹಲವಾರು ವರ್ಷಗಳಿಂದ ಕಿರು ಸೇತುವೆಗಳನ್ನು ಬಳಸಿಕೊಂಡು ಓಡಾಡುತ್ತಿದ್ದಾರೆ. ಇದು ಬಹಳ ಅಪಾಯಕಾರಿಯಾಗಿದೆ. ಆದ್ದರಿಂದ ಗ್ರಾಮೀಣ ಜನೆತೆಯು ತಮ್ಮ ಊರಿಗೆ ಬಂದ ಶಾಸಕರು, ಮಂತ್ರಿಗಳಿಗೆ ಕಾಲುಸಂಕ ಸಮಸ್ಯೆಗೆ ಹರಿಹಾರ ನೀಡುವಂತೆ ಮನವಿಯನ್ನು ಸಲ್ಲಿಸಿದ್ದರು ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಗ್ರಾಮ ಸಭೆಗಳಲ್ಲಿ ಈ ಬಗ್ಗೆ ಚರ್ಚೆಗೆ ಬಂದರೂ ಕೂಡ ಯಾವುದೇ ರೀತಿಯ ಉಪಯೋಗವಾಗಿರಲಿಲ್ಲ.
ಇತ್ತೀಚಿನ ಶಾಸಕ ಗೋಪಾಲಕೃಷ್ಣ ಬೇಳೂರು ಕಿರು ಸೇತುವೆಗಳು, ತಡೆಗೋಡೆ ಹಾಗೂ ಕಾಲು ಸಂಕಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ನೀರಾವರಿ ನಿಗಮಕ್ಕೆ ಮನವಿ ಸಲ್ಲಿಸಿದ್ದು, ಇದೀಗ ಮಂಜೂರಾತಿ ದೊರೆತಿದೆ. ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿರುವ ಕಾಲು ಸಂಕಗಳಿಗೆ ಈ ಪ್ರಮಾಣದ ಹಣ ದೊರೆತಿರುವುದು ಮೊಟ್ಟ ಮೊದಲ ಬಾರಿಯಾಗಿದೆ. ಹೊಸ ನಗರ ತಾಲ್ಲೂಕಿನ 234 ಕಡೆಗಳಲ್ಲಿ ಹಾಗೂ ಹೊಸನಗರ ತಾಲ್ಲೂಕಿನ ಕಾಲುಸಂಕ, ಕಿರು ಸೇತುವೆಗಳ ನಿರ್ಮಾಣಕ್ಕೆ ಅನುದಾನ ಬಳಕೆಯಾಗಲಿದೆ.