
ಶಿವಮೊಗ್ಗ: ಕಮಲೇಶ್ವರ ಕ್ರೀಡಾಂಗಣದಲ್ಲಿ ಚಿಕ್ಕಲುಗುಂಜಿ ಗ್ರಾಮದ ಕಮಲೇಶ್ವರ ಕ್ರಿಕೇಟರ್ಸ್ ಗೆಳೆಯರ ಸಂಘ ಮತ್ತು ಮಾತೃಭೂಮಿ ಯುವಕರ ಗುಂಪು ನಡೆಸಿದ ಶ್ರಮದಾನದಲ್ಲಿ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್ರಾಜ್ ಕಣ್ಣೂರು ಮಾತನಾಡಿದರು. ಕ್ರೀಡೆಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಕೀರ್ತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಹಾಗೆಯೇ ಗ್ರಾಮದ ಏಳಿಗೆಯ ಹಿತಾಸಕ್ತಿಯಿಂದಾಗಿ ಪರಿಸರವನ್ನು ರಕ್ಷಿಸುವಲ್ಲಿ ಹಾಗೂ ಗ್ರಾಮವನ್ನು ಹಚ್ಚ-ಹಸಿರಾಗಿಸುವಲ್ಲಿ ಯುವ ಪೀಳಿಗೆಯ ಪಾತ್ರ ಬಹಳಷ್ಟಿದೆ ಹಾಗೂ ಯುವಜನರು ಕೈಜೋಡಿಸಬೇಕು ಎಂದಿದ್ದಾರೆ. ಕೆ.ವಿನಾಯಕ, ಉಮೇಶ್, ದಿನೇಶ್, ಮಂಜುನಾಥ್, ಶಿವು, ಮನು, ನಿರಂಜನ ಇತರರು ಉಪಸ್ಥಿತರಿದ್ದರು.