
ಶಿವಮೊಗ್ಗ: ಮಲೆನಾಡಿನಲ್ಲಿ ಇದೇ ಮೊದಲ ಬಾರಿಗೆ, ಅತ್ಯಂತ ಕಷ್ಟಕರವಾದ ಸಣ್ಣ ರಂಧ್ರದ ಚಿಕಿತ್ಸೆಯನ್ನು ನಂಜಪ್ಪ ಲೈಫ್ ಕೇರ್ ಯಶಸ್ವಿಯಾಗಿ ನಡೆಸಿದ್ದು, ಫ್ಲೋಡೈವರ್ಡರ್ ಬಳಸಿಕೊಂಡು ಮೆದುಳಿನ ರಕ್ತಸ್ರಾವ ತಪ್ಪಿಸಿ ೨೧ ವರ್ಷದ ಯುವತಿಗೆ ಮರುಜೀವ ನೀಡಿದೆ. ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಜೀವಿತಾವಧಿ ಅಂಗವೈಕಲ್ಯ ಸಂಭವವಿತ್ತು ಅದನ್ನು ಅರವಳಿಕೆ ತಜ್ಞ ಡಾ.ಪ್ರವೀಣ್ ಕುಮಾರ್ ಮತ್ತು ತಂಡವೂ ಅನಸ್ತೇಶಿಯಾ ನೀಡಿ ಮೆದುಳಿನ ಪ್ರಮುಖ ರಕ್ತನಾಳ ತಲುಪಲು ತೊಡೆಯಲ್ಲಿ ಸಣ್ಣ ರಂಧ್ರದ ಮೂಲಕ ತೆಳುವಾದ ಟ್ಯೂಬ್ ಬಳಸಿ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ. sಸಾಮಾನ್ಯವಾಗಿ ಈ ರೀತಿಯ ಶಸ್ತ್ರ ಚಿಕಿತ್ಸೆಗೆ ೭ರಿಂದ೮ ಲಕ್ಷ ರೂ ಬೇಕಾಗಿದ್ದು, ಬೆಂಗಳೂರು, ಬೆಳಗಾವಿಯಂತಹ ದೊಡ್ಡ ನಗರಗಳಲ್ಲಿ ಮಾತ್ರ ಲಭ್ಯವಿತ್ತು. ಆದರೆ ಈಗ ಮಲೆನಾಡಿಗರು ಕೂಡ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.