
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಘಟಕದ ಕಛೇರಿಯ ಉದ್ಘಾಟನಾ ಸಮಾರಂಭವನ್ನು ನಿನ್ನೆ ಶಿವಮೊಗ್ಗ ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆ(ರಿ) ವತಿಯಿಂದ ನೆರವೇರಿಸಲಾಯಿತು. ಈ ಕಾರ್ಯಕ್ರವನ್ನು ರಾಜ್ಯಾಧ್ಯಕ್ಷರಾದ ಎಂ. ಓಂಕಾರಪ್ಪ, ರಾಜ್ಯ ಸಮಿತಿಯ ಸಂಸ್ಥಾಪಕರಾದ ರಾಜ್ಯಾಧ್ಯಕ್ಷ ಹಾಗೂ ಹೆಚ್.ಜಿ. ರಮೇಶ್ ಕುಣಿಗಲ್ ರವರು ಉದ್ಘಾಟನೆಯನ್ನು ಮಾಡಿದ್ದಾರೆ. ಭ್ರಷಷ್ಟಾಚಾರದ ವಿರುದ್ಧ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಸಂಘ ಸಂಸ್ಥೆಗಳು ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಗೌರವಾಧ್ಯಕ್ಷರಾದ ಈರಪ್ಪರವರು ಈ ಕಾರ್ಯಕ್ರಮದಲ್ಲಿ ಘನ ಅಧ್ಯಕ್ಷತೆಯನ್ನು ವಹಿಸಿದರು. ರಾಜ್ಯ ಉಪಾಧ್ಯಕ್ಷರಾದ ಶಿವಾನಂದ ಮಾಳಗಿರವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಮೋಹನ್, ಕಲ್ಯಾಣ ಕರ್ನಾಟಕದ ಉಪಾಧ್ಯಕ್ಷರಾದ ಹನುಮಂತ ಹುಲಿಕಟ್ಟೆ, ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಶ್ರೀ ಮತಿ ಮೀನಾ.ಎಂ.ಎಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಬಿ.ಟಿ, ಜಿಲ್ಲಾ ಕಾರ್ಯಾಧ್ಯಕ್ಷರಾದ ನಾಗರಾಜ್ ಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಪ್ರಶಾಂತ್ ಎಂ.ಜಿ ಹಾಗೂ ಶ್ರೀಮತಿ ಲಕ್ಷ್ಮೀ ಕಳಸಣ್ಣನವರು, ಜಿಲ್ಲಾ ಕಾರ್ಯದರ್ಶಿ ಕು.ಭಾಗ್ಯ ಪಿ. ಗೌಡ ಹಾಗೂ ಡಾ. ಈಶ್ವರ ಎನ್.ಡಿ, ಸೊರಬ ತಾಲ್ಲೂಕು ಅಧ್ಯಕ್ಷ ರಾಜೇಶ್ ಕಾನಡೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಸತೀಶ್ ಅಂಗಡಿ. ವೆಂಕಟೇಶ್ ಸಿ, ಶಿಕಾರಿಪುರ ತಾಲ್ಲೂಕು ಅಧ್ಯಕ್ಷರಾದ ಕು. ಪ್ರಭಾವತಿ ಹೆಚ್ ಮುಂತಾದವರು ಉಪಸ್ಥಿತರಿದ್ದರು.