
ಶಿವಮೊಗ್ಗ: ಇಂದು ಬೆಳಗ್ಗೆ8 ಗಂಟೆಗೆ ನಗರದ ಅಮೀರ್ ಅಹಮದ್ ವೃತ್ತದಲ್ಲಿ ಮಿನಿ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದ ಘಟನೆ ನಡೆದಿದೆ. ಅಮೀರ್ ಅಹಮದ್ ವೃತ್ತದಿಂದ ಗಾಂಧಿಬಜಾರ್ ಕಡೆ ಹೋಗುವ ಪುಟ್ಪಾತ್ ಮೇಲೆ ಬಸ್ ಪಲ್ಟಿಯಾಗಿ ಬಿದ್ದಿದ್ದು. ಬಸ್ನಲ್ಲಿ ಕೇವಲ ಚಾಲಕ ಮಾತ್ರ ಇದ್ದ ಕಾರಣ ಆತನ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಪುಟ್ಪಾತ್ ಮೇಲೆ ಬಿದ್ದ ಕಾರಣದಿಂದ ಪುಟ್ಪಾತ್ ರೈಲಿಂಗ್ಸ್ಗಳು ಕಿತ್ತು ಹೋಗಿದೆ, ಹಾಗೆಯೇ ಬಸ್ನ ಒಂದು ಬದಿಯ ಕಿಟಕಿಯ ಗಾಜುಗಳು ಹಾನಿಯಾಗಿದೆ.
ಗೋಪಿ ವೃತ್ತದಿಂದ ಆಟೋ ವೇಗವಾಗಿ ಬಂದಿದ್ದು. ಬಿಹೆಚ್ ರಸ್ತೆಯಿಂದ ಬಸ್ ನಿಲ್ದಾಣದ ಕಡೆಗೆ ಹೊರಟ ಕೆ.ಎ51ಡಿ 2597 ಸಂಖ್ಯೆಯ ಮಿನಿ ಬಸ್ ಆಟೋವನ್ನು ತಪ್ಪಿಸಲು ಹೋಗಿ ಬ್ರೇಕ್ ಹಾಕಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದ್ದು. ಚಾಲಕ ಶ್ರೀಧರನ ಬದಿ ಬಿದ್ದಿದ್ದರೂ ಶ್ರೀಧರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಶ್ಚಿಮ ಟ್ರಾಫಿಕ್ ಠಾಣೆ ಸಬ್ ಇನ್ಸ್ಪೆಕ್ಟರ್ ಭಾರತಿ ಮತ್ತವರ ಸಿಬ್ಬಂದಿಗಳು ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕ್ರೇನ್ ಮೂಲಕ ಬಸ್ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.