
ಸಕಲೇಶಪುರ: ವರುಣನ ರೌಧ್ರ ನರ್ತನದಿಂದಾಗಿ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಬಳಿ ಜೂನ್ ೨೫ ರ ರಾತ್ರಿ ಗುಡ್ಡಕುಸಿತವಾಗಿದ್ದು, ಮಣ್ಣು ತೆರೆವು ಕಾರ್ಯ ಸಂಪೂರ್ಣಗೊಂಡಿದ್ದು ಏಕ ಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾದ ಕಾರಣ ಶಿರಾಡಿಘಾಟ್ ರಸ್ತೆಯಲ್ಲಿ ಮಧ್ಯರಾತ್ರೀ ೧ ಗಂಟೆಯಿಂದ ವಾಹನ ಸಂಚಾರ ಬಂದ್ ಆಗಿ ಸಾವಿರಾರು ಪ್ರಯಾಣಿಕರು ಟ್ರಾಫಿಕ್ ಜಾಮ್ನಲ್ಲಿ ಪರದಾದುವಂತಾಯಿತು.