
ಶಿವಮೊಗ್ಗ: ನಿನ್ನೆ ರಾತ್ರಿ ಆರು ದುಷ್ಕರ್ಮಿಗಳು ಶಿವಮೊಗ್ಗ ನಗರದ ಒಡಿನಕೊಪ್ಪ ಸಮೀಪದ ಪುಟ್ಟಪ್ಪಕ್ಯಾಂಪ್ ಬಡಾವಣೆಯೊಂದರಲ್ಲಿ ಶಸ್ತ್ರಾಸ್ತ್ರ ಹಿಡಿದು ಓಡಾಡಿದ ಘಟನೆ ನಡೆದಿದ್ದು. ಅಲ್ಲಿ ವಾಸಿಸುವವರು ಆತಂಕಕ್ಕೊಳಗಾಗಿದ್ದು. ಈ ಘಡನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದುರುಳರು ತಮ್ಮನ್ನು ತಾವು ಮರೆಮಾಚಲು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದಾರೆ. ಜೀನ್ಸ್ ಪ್ಯಾಂಟ್, ಬನಿಯಾನ್ ಮಾತ್ರ ಧರಿಸಿದ್ದು, ಕೈಯಲ್ಲಿ, ಸೊಂಟದಲ್ಲಿ ಶಸ್ತ್ರಾಸ್ತ್ರ ಹಾಗೂ ಟಾರ್ಚ್ ಹಿಡಿದು ರಸ್ತೆಗಳಲ್ಲಿ ಸಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳೀಯರು ಪೋಲಿಸರಿಗೆ ಮಾಹಿತಿಯನ್ನು ನೀಡಿದ್ದು. ಈ ಘಟನೆಯು ತುಂಗಾ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ