
ನವದೆಹಲಿ: ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ದೆಹಲಿಯ ಕೆಂಪು ಕೋಟೆಯಲ್ಲಿ ಭದ್ರತಾ ಸಿದ್ಧತೆ ನಡೆಯುತ್ತಿದ್ದ ಕವಾಯತಿನಲ್ಲಿ, ನಕಲಿ ಬಾಂಬ್ ಪತ್ತೆಹಚ್ಚಲು ವಿಫಲವಾದ ಕಾರಣ ದೆಹಲಿ ಪೊಲೀಸ್ ಇಲಾಖೆ ಏಳು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ಸಿವಿಲ್ ಡ್ರೆಸ್ನಲ್ಲಿ ವಿಶೇಷ ತಂಡವು ನಕಲಿ ಬಾಂಬ್ನ್ನು ತೆಗೆದುಕೊಂಡು ಕೆಂಪು ಕೋಟೆ ಆವರಣ ಪ್ರವೇಶಿಸಿದಾಗ, ಅಲ್ಲಿಯ ಭದ್ರತೆಗೆ ನಿಯೋಜಿತವಿದ್ದ ಕಾನ್ಸ್ಟೆಬಲ್ಗಳು ಮತ್ತು ಹೆಡ್ ಕಾನ್ಸ್ಟೆಬಲ್ಗಳು ಅದನ್ನು ಗುರುತಿಸಲು ವಿಫಲರಾದರು. ಭದ್ರತೆ ಪ್ರತಿಯೊಬ್ಬ ಪೊಲೀಸರ ಪ್ರಾಥಮಿಕ ಕರ್ತವ್ಯವಾಗಿರುವ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.