ಚಿಕ್ಕಮಗಳೂರು: ಸನಾತನ ಧರ್ಮದ ಮೌಲ್ಯಗಳು ಹಾಗೂ ವೈದಿಕ ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಪಸರಿಸುವ ಉದ್ದೇಶದಿಂದ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಅಧೀನದಲ್ಲಿರುವ ಶೃಂಗೇರಿಯ ‘ಶ್ರೀ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಮಹಾಪಾಠಶಾಲಾ’ ವತಿಯಿಂದ 10 ರಿಂದ 15 ವರ್ಷದೊಳಗಿನ ಉಪನೀತ ಬ್ರಾಹ್ಮಣ ವಟುಗಳಿಗಾಗಿ ಏಪ್ರಿಲ್ 30 ರಿಂದ ಮೇ 14, 2026 ರವರೆಗೆ 15 ದಿನಗಳ ‘ಸಂಸ್ಕಾರ’ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಶೃಂಗೇರಿ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳು ಹಾಗೂ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳ ದಿವ್ಯ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ನಡೆಯಲಿರುವ ಈ ವಸತಿಯುತ ಶಿಬಿರದಲ್ಲಿ ಸಂಧ್ಯಾವಂದನೆ, ಗಣಪತಿ ಸೂಕ್ತ, ಅಥರ್ವಶೀರ್ಷ ಸೇರಿದಂತೆ ವಿವಿಧ ಸ್ತೋತ್ರಗಳ ಶಾಸ್ತ್ರೋಕ್ತ ಪಾಠ, ಯೋಗಾಭ್ಯಾಸ, ನೈತಿಕ ಮೌಲ್ಯಗಳ ಬೋಧನೆ, ಜಗದ್ಗುರುಗಳ ಅನುಗ್ರಹ ಭಾಷಣಗಳ ಪ್ರದರ್ಶನ ಹಾಗೂ ದೇವಾಲಯ ದರ್ಶನದ ಅವಕಾಶಗಳನ್ನು ಒದಗಿಸಲಾಗುತ್ತದೆ. ಭಾಗವಹಿಸುವ ವಿದ್ಯಾರ್ಥಿಗಳಿಗೆ ವಸತಿ, ಭೋಜನ ಮತ್ತು ಉಪಾಹಾರ ಸಂಪೂರ್ಣ ಉಚಿತವಾಗಿದ್ದು, ಕೇವಲ 30 ಮಂದಿಗೆ ಮೊದಲ ಆದ್ಯತೆಯ ಮೇರೆಗೆ ಪ್ರವೇಶ ನೀಡಲಾಗುತ್ತದೆ. ಆಸಕ್ತ ಪೋಷಕರು ಏಪ್ರಿಲ್ 20 ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕಿದ್ದು, ಏಪ್ರಿಲ್ 29 ಸಂಜೆ ಹಾಜರಾಗಬೇಕು; ಹೆಚ್ಚಿನ ಮಾಹಿತಿಗೆ 8762594805 ಅಥವಾ 8217251670 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.
