
ಶೃಂಗೇರಿ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ ಯೋಜನೆ ಅಡಿ ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ ಶೃಂಗೇರಿ ತಾಲ್ಲೂಕಿನ ಬೇಗಾರು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ವು ಉತ್ತಮವಾಗಿ ಕಾರ್ಯನಿರ್ವಹಿಸಿದ ಒಕ್ಕೂಟವೆಂದು ಜಿಲ್ಲೆಯ 226 ಒಕ್ಕೂಟಗಳಲ್ಲಿ,ತೃತೀಯ ಸ್ಥಾನ ಪಡೆದಿದ್ದು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರವನ್ನು ಮಾನ್ಯ ಯೋಜನ ನಿರ್ದೇಶಕರು H. L ಸುಜಾತಾ ಜಿಲ್ಲಾ ಪಂಚಾಯತಿ ಚಿಕ್ಕಮಂಗಳೂರು ಇವರು ಪ್ರಶಸ್ತಿ ವಿತರಿಸಿದರು.
ಇವರಿಗೆ ಎಲ್ಲಾ ಶೃಂಗೇರಿ ತಾಲ್ಲೂಕಿನ ಒಕ್ಕೂಟಗಳು, ತಾಲ್ಲೂಕು ಮಟ್ಟದ ಒಕ್ಕೂಟ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಕ ಅಧಿಕಾರಿಗಳು,ಸಿಬ್ಬಂದಿಗಳು,ಮತ್ತು ತಾಲೂಕು ಪಂಚಾಯತಿ ಯ NRLM ಸಿಬ್ಬಂದಿಗಳಾದ ಆದರ್ಶ್, ಸುಪ್ರಿತಾಅಂಜನ್ , ಪ್ರೀತಿಕ್, ಅರ್ಪಿತಾ, ಪವಿತ್ರ, ಮಧುರ ಅಭಿನಂದಿಸಿದರು.





