
ಶಿವಮೊಗ್ಗ: ಆಗಸ್ಟ್ 12ರಂದು ವಿಶ್ವ ಆನೆಗಳ ದಿನಾಚರಣೆ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿ ಆಚರಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ 23 ಆನೆಗಳನ್ನು ಸಿರಿ-ಸಿಂಗಾರಗಳಿಂದ ಅಲಂಕರಿಸಲಾಗಿತ್ತು. ಸಿಂಗರಿಸಿದ ಆನೆಗಳು ನೋಡುಗರನ್ನು ಆಕರ್ಷಿಸುತ್ತಿತ್ತು. ಇದೇ ಸಮಯದಲ್ಲಿ ಆನೆ ಬಿಡಾರದಲ್ಲಿ ಜನಿಸಿದ ಆನೆ ಮರಿಗಳಿಗೆ ನಾಮಕರಣವನ್ನು ನೆರವೇರಿಸಲಾಯಿತು. ಚಾಮುಂಡಿ ಮತ್ತು ತುಂಗಾ ಎಂಬ ಹೆಸರನ್ನು ಮರಿ ಆನೆಗಳು ಪಡೆದವು. ಗಜ ಪಡೆಗಳಿಗೆ ಹಣ್ಣು-ಹಂಪಲು ನೀಡಲಾಯಿತು. ಆನೆಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಕಾವಡಿಗಳು ಹಾಗೂ ಮಾವುತರು ಉಪಸ್ಥಿತರಿದ್ದರು.