
ಸಾಗರ: ಯಕ್ಷಗಾನ ಕಲಾವಿದರಾದ ರಮೇಶ್ ಹೆಗಡೆ ಗುಂಡೂಮನೆಯವರು ಸಂಸ್ಥೆಯೊಂದು 25 ವರ್ಷಗಳಿಂದ ನಡೆಸಿರುವುದರ ಜೊತೆಗೆ ದಾಖಲೆಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡುವ ಕಾರ್ಯ ಮಾಡಿರುವುದು ಸಂಸ್ಥೆಯ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸಾಗರದ ನೃತ್ಯ ಭಾಸ್ಕರ ಸಂಭಾಂಗಣದಲ್ಲಿ ಶನಿವಾರ ಯಕ್ಷಶ್ರೀ ರಜತ ಸಂಭ್ರಮದ ಅಂಗವಾಗಿ ವಿಜಯ ಸೇವಾ ಟ್ರಸ್ಟ್, ಯಕ್ಷಶ್ರೀ ಸಂಸ್ಥೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ 25 ವರ್ಷಗಳ ಮಾಹಿತಿ ದಾಖಲೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಆ ಕ್ಷಣಕ್ಕೆ ಕಾರ್ಯಕ್ರಮ ಮಾಡುವುದು ಮುಖ್ಯವಲ್ಲ. ಮುಂದಿನ ಪೀಳಿಗೆಗೆ ಸಂಸ್ಥೆಯ ನಿಜವಾದ ಸಾಧನೆ ಗುರುತಿಸುವ ಮಾನದಂಡವಾಗಿ ಹಿಂದಿನ ದಾಖಲೆಗಳು ಮುಖ್ಯವಾಗಲಿದೆ. ಹಾಗಾಗಿ ಯಾವುದೇ ಸಂಸ್ಥೆ ಎಷ್ಟು ಕಾಲ ಇದೆ ಎನ್ನುವುದಕ್ಕಿಂತ ತನ್ನೊಂದಿಗೆ ದಾಖಲೆ ಏನಿದೆ ಎನ್ನುವುದನ್ನು ಗಮನಿಸುವುದು ಮುಖ್ಯ ಎಂದರು.
ಯಕ್ಷಶ್ರೀ ಟ್ರಸ್ಟಿ ಎ.ಎಂ ಸುಬ್ಬರಾವ್, ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ.ಎಚ್.ಎಸ್ ಮೋಹನ್, ಕಾರ್ಯದರ್ಶಿ ಮನು ಇತರರಿದ್ದರು. ನಂತರ ಯಕ್ಷ ಪ್ರವೀಣ ಕಲಾವೇದಿಕೆಯಿಂದ ಕಂಸವಧೆ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಪ್ರಶಾಂತ್ ಮದ್ಯಸ್ಥ, ಮಂಜುನಾಥ ಗುಡ್ಡೆದಿಂಬ, ಅಶೋಕ ಕ್ಯಾಸನೂರು, ಮಹೇಶ ಮುಮ್ಮೇಳದಲ್ಲಿ ವೀಣಾ ಪ್ರಸನ್ನ ಕುಮಾರ್, ಸಾನಿಧ್ಯ, ನಾರಯಣ ಸ್ವಾಮಿ, ಯೋಗೀಶ್, ಸನಿಹ, ನಾಗರಾಜ್, ವಂದನಾ, ಸಾನಿಕಾ, ವರ್ಷಿಣಿ, ಸಾನಿಕಾ, ಆಂತರ್ಯ ಇದ್ದರು.