
ಸಾಗರ: ಕೆಲವು ತಿಂಗಳಿನಿಂದ ಸಾಗರ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಾವಿನ ಹೊಳೆ, ಕನ್ನ ಹೊಳೆ ಮತ್ತು ವಾರದ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು. ಇದರ ಪ್ರವಾಹದಿಂದ ಸಾವಿರಾರು ಎಕರೆ ಕೃಷಿ ಭೂಮಿ ಸಂಪೂರ್ಣವಾಗಿ ಜಲಾವೃತವಾಗಿದೆ. ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಬೆಳೆಸುವ ದಾರಿಯೂ ಕೂಡ ಜಲಾವೃತಗೊಂಡಿದ್ದು. ಪ್ರತೀ ವರ್ಷವೂ ಕೂಡ ಮಳೆಗಾಲದ ಸಮಯದಲ್ಲಿ ಅಪಾರ ಬೆಳೆ ನಷ್ಟವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ನೆರೆ ಪೀಡಿತ ಪ್ರದೇಶಕ್ಕೆ ಸಚಿವರು ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಸಚಿವರು ನೆರೆಯನ್ನು ನಿಯಂತ್ರಿಸಿಸಲು ವಾರದ ನದಿಗೆ, ವಾರದ ಮೂಲದ ಸೊರಬ ವರೆಗೆ 6 ಕಡೆ ಸುಮಾರು 53ಕೋಟಿ ವೆಚ್ಚದ ಬ್ಯಾರೇಜ್ ನಿರ್ಮಿಸುವುದಾಗಿ ಸಚಿವರು ಹೇಳಿದ್ದಾರೆ. ಈ ಯೋಜನೆಯನ್ನು ಮುಂದಿನ ಎರಡು ಮೂರು ತಿಂಗಳಲ್ಲಿ ಟೆಂಡರ್ ಮುಗಿಸಿ ಕಾಮಗಾರಿಯನ್ನು ಪ್ರಾರಂಭಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.