
ಸಾಗರ: ಗಣೇಶೋತ್ಸವ ವಿಜೃಭಣೆಯಿಂದ ನಡೆಯುತ್ತಿದ್ದು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ದಿಗಟೆಕೊಪ್ಪ ಗ್ರಾಮದ ಗಣಪತಿಯ ವಿಸರ್ಜನೆಯ ವೇಳೆಯಲ್ಲಿ ಜನರೇಟರ್ ಸ್ಪಾರ್ಕ್ಗೊಂಡು ಜನರೇಟರ್ ಅಲ್ಪ ಪ್ರಮಾಣದಲ್ಲಿ ಸ್ಪೋಟಗೊಂಡಿರುವ ಘಟನೆ ನಡೆದಿದ್ದು, ಈ ಘಟನಾ ವೇಳೆಯಲ್ಲಿ ಒರ್ವ ಯುವಕ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಗಾಯಗೊಂಡ ಯುವಕನನ್ನು ಲೋಕೇಶ್ ದಿಗಟೆಕೊಪ್ಪ ಎಂದು ಗುರುತಿಸಲಾಗಿದೆ. ತಕ್ಷಣವೇ ಲೋಕೇಶ್ನನ್ನು ಸ್ಥಳೀಯ ಯುವಕರು ಸಾಗರದ ಜಿಲ್ಲಾಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ಮೂಲಕ ರವಾನಿಸಲಾಯಿತು.