
ಸಾಗರ: ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದಿಂದ ರಾಜ್ಯಕ್ಕೆ ಪ್ರಥಮ ರ್ಯಾಂಕ್ನ್ನು ಆರ್ ವಂದನಾ ಪಡೆದಿದ್ದಾರೆ, ಶ್ರೀಧರ ನಗರದಲ್ಲಿ ಚಿರಂತನ ಮಹಿಳಾ ಒಕ್ಕೂಟ ಹಾಗೂ ವಿನಾಯಕ ಗೆಳೆಯರ ಬಳಗದ ವತಿಯಿಂದ ಆಯೋಜಿದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ವಂದನಾ ಪೋಷಕರ ಪ್ರೋತ್ಸಾಹ ಹಾಗೂ ಅಧ್ಯಾಪಕರ ಮಾರ್ಗದರ್ಶನ ಕಾರಣ ಎಂದು ತಿಳಿಸಿದ್ದಾರೆ. ಹಾಗಯೇ ಬಡತನದಿಂದಾಗಿ ಶಿಕ್ಷಣದಿಂದ ವಂಚಿತರಾಗಬರಾದು. ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕ್ನಿಂದ ಆರ್ಥಿಕ ಸಹಕಾರವಾಗುತ್ತದೆ ಎಂದಿದ್ದಾರೆ. ಸಾಗರ ಕ್ಷೇತ್ರಕ್ಕೆ ಇಂಜಿನೀಯರಿಂಗ್ ಕಾಲೇಜನ್ನು ಮಂಜೂರು ಮಾಡುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ರವರು ಸಿಎಂ ಗೆ ಮನವಿಯನ್ನು ಸಲ್ಲಿಸಿದ್ದಾರೆ. ವಂದನಾ ಪೋಷಕರು ಕೂಲಿ ಕೆಲಸ ಮಾಡುತ್ತಿದ್ದು ಇದರಿಂದಾಗಿ ಅವರು ಶಿಕ್ಷಣದಿಂದ ದೂರ ಉಳಿದಿಲ್ಲ, ವಿದ್ಯಾರ್ಥಿನಿ ಬ್ಯಾಂಕ್ನಿಂದ ಸಾಲವನ್ನು ಪಡೆದಿದ್ದರು. ಇದೀಗ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬಂದು ಮಾದರಿಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ಮಂಜುಳಾ, ಕಮಲಾ, ನಾಗರಾಜ್, ಮಹಾದೇವ, ಜನಾರ್ದನ ಪೂಜಾರಿ, ಉಷಾ, ಮಂಜುನಾಥ್, ಚರಣ್ ಮುಂತಾದವರು ಉಪಸ್ಥಿತರಿದ್ದರು.


