
ಸಾಗರ: ಸಾಗರದ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಹವಲು ತಿಂಗಳು ಕಾರ್ಯ ನಿರ್ವಹಿಸಿ ಕ್ಲೀನ್ ಹ್ಯಾಂಡ್ ಅಧಿಕಾರಿ ಎಂಬ ಹೆಸರನ್ನು ಪಡೆದಿರುವ ಬಿಎಲ್ ಶಿವಪ್ರಕಾಶ್ರವರು ಇದೀಗ ಸಾಗರದ ಸಹಾಯಕ ಕೃಷಿ ನಿರ್ದೇಶಕರಾಗಿ ಸರ್ಕಾರದಿಂದ ನೇಮಕಗೊಂಡಿದ್ದಾರೆ. ಮೂಲತಹ ರೈತನ ಪುತ್ರನಾಗಿರುವ ಬಿಎಲ್ ಶಿವಪ್ರಕಾಶರವರು ಹಲವು ವರ್ಷಗಳ ಕಾಲ ಸಾಗರದ ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಬಿಎಲ್ ಶಿವಪ್ರಕಾಶರವರು ದಕ್ಷ, ಚತುರ ಹಾಗೂ ಪ್ರಾಮಾಣಿಕರಾದ ಇವರನ್ನು ಸರ್ಕಾರವು ಇದೀಗ ಸಹಾಯಕ ಕೃಷಿ ನಿರ್ದೇಶಕರಾಗಿ ನೇಮಿಸಿ ಆದೇಶ ಹೊರಡಿಸಿದೆ.