
ಆರ್ಎಸ್ಎಸ್ ನಾಯಕರಾದ ದತ್ತಾತ್ರೇಯ ಹೊಸಬಾಳೆಯವರು ಜಾತ್ಯಾತೀತ ಮತ್ತು ಸಮಾಜವಾದಿ ಪದ ತೆಗೆಯಬೇಕೆಂಬ ಮಾತಿನ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಕ್ಸಮರ ನಡೆಸಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಆರ್ಎಸ್ಎಸ್ ಬ್ಯಾನ್ ಮಾಡಬೇಕು ಎಂದು ಹೇಳಿದ್ದಾರೆ. ಆರ್ಎಸ್ಎಸ್ ಅವರನ್ನು ಈಗಾಗಲೆ ಎರಡು ಭಾರಿ ಬ್ಯಾನ್ ಮಾಡಿದ್ದೇವೆ, ಬ್ಯಾನ್ ತೆಗೆದಿದ್ದೆ ತಪ್ಪಾಗಿದೆ ಎಂದು ಆರ್ಎಸ್ಎಸ್ ವಿರುದ್ಧ ಗುಡುಗಿದ್ದಾರೆ. ಬ್ಯಾನ್ ಮಾಡಿದಾಗಲೆಲ್ಲ ಅವರು ಕೈಕಾಲು ಹಿಡಿದು, ದೇಶ ದ್ರೋಹ ಕೆಲಸ ಮಾಡುವುದಿಲ್ಲ ಎಂದು ಬಂದಿದ್ದರು. ಅದಕ್ಕೆಲ್ಲ ದಾಖಲೆಗಳು ಇವೆ ಎಂದಿದ್ದಾರೆ. ಜಾತ್ಯಾತೀತ, ಸಮಾನತೆ, ಸಮನವಾದ ಅವಕಾಶಗಳು ಆರ್ಎಸ್ಎಸ್ ಅವರಿಗೆ ಅಲರ್ಜಿ ಎಂದಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾತಿಗೆ ಪ್ರತ್ಯುತ್ತರವಾಗಿ ಬಿಜೆಪಿಯ ಘಟಾನುಘಟಿ ನಾಯಕರು ತೀವ್ರ ವಾಗ್ದಾಳಿಯನ್ನ ನಡೆಸಿದ್ದಾರೆ. ಹಾಗೆಯೇ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರರವರು ದಂಡಿಗೆದರಲಿಲ್ಲ ದಾಳಿಗೆದರಲಿಲ್ಲ ಖಾಲಿ ಡಬ್ಬದ ಸದ್ದಿಗೆ ಹೆದರಲಾದಿತೇ? ಎಂದು ಹೇಳಿದ್ದಾರೆ.