ರೈಲ್ವೆ ನೇಮಕಾತಿ ಮಂಡಳಿ (RRB) ಲೆವೆಲ್–1 ಹುದ್ದೆಗಳಿಗಾಗಿ ಸುಮಾರು 2೦,000 ಕ್ಕೂ ಅಧಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲು ಸಿದ್ಧವಾಗಿದೆ. ವರದಿಗಳ ಪ್ರಕಾರ ಜನವರಿ ಮೂರನೇ ವಾರದಲ್ಲಿ ಅಧಿಕೃತ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆಯಿದೆ. ಈ ನೇಮಕಾತಿಯಲ್ಲಿ ಟ್ರ್ಯಾಕ್ ನಿರ್ವಹಣೆದಾರರು ಹಾಗೂ ಇತರೆ ಗ್ರೂಪ್–ಡಿ ಹುದ್ದೆಗಳು ಸೇರಲಿವೆ. ಭೋಪಾಲ್ RRB ಅನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ಅದು ಮೇಲ್ವಿಚಾರಣೆ ಮಾಡಲಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಹಾಗೂ ಇತರೆ ವಿವರಗಳಿಗಾಗಿ RRB ಅಧಿಕೃತ ವೆಬ್ಸೈಟ್ ಗಮನಿಸುವಂತೆ ಸೂಚಿಸಲಾಗಿದೆ.
