
ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ರಿಷಲ್ ತಾವ್ರೊ ಅವರು ಬಿಟೆಕ್ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಗಳಿಸಿದ್ದಾರೆ. ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅವರು ತಮ್ಮ ಶೈಕ್ಷಣಿಕ ಮೇಲುಗೈಯಿಂದ ನಿಡುವಾಳೆ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ನಿಡುವಾಳೆಯ ಜೆಎಂಜೆ ಪ್ಯಾನ್ಸಿ ಸ್ಟೋರ್ಸ್ ಮಾಲಿಕ ಜೋಸೆಫ್ ತಾವ್ರೊ ಹಾಗೂ ರೋಸ್ಲಿನ್ ದಂಪತಿಯ ಪುತ್ರಿಯಾಗಿರುವ ರಿಷಲ್ ಅವರ ಸಾಧನೆಗೆ ಗ್ರಾಮಸ್ಥರು, ಸ್ನೇಹಿತರು ಹಾಗೂ ಬಂಧುಗಳು ಹರ್ಷ ವ್ಯಕ್ತಪಡಿಸಿದ್ದಾರೆ.





