
ಇತ್ತೀಚೆಗಷ್ಟೇ ಕಾಂತಾರ ಚಿತ್ರದ ಮೂಲಕ ಸದ್ದು ಮಾಡಿದ್ದ ಕನ್ನಡದ ಸೂಪರ್ ಸ್ಟಾರ್ ರಿಷಬ್ ಶೆಟ್ಟಿ ತೆಲುಗು ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ. ಪ್ರಶಾಂತ್ ವರ್ಮಾ ಅವರ ಕುತೂಹಲದಿಂದ ನಿರೀಕ್ಷಿತ ಚಿತ್ರ ಜೈ ಹನುಮಾನ್ ರಿಷಬ್ ಅವರ ತೆಲುಗು ಚಿತ್ರರಂಗದ ಚೊಚ್ಚಲ ಪ್ರವೇಶವನ್ನು ಸೂಚಿಸುತ್ತದೆ, ಆದರೆ ಅವರು ಈಗ ಕಾಂತಾರ ಪ್ರೀಕ್ವೆಲ್ನಲ್ಲಿ ಆಕ್ರಮಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಮೊದಲ ಟ್ರೇಲರ್ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ರಿಷಬ್ ಶೆಟ್ಟಿ ಮತ್ತೊಂದು ಮುಖ್ಯವಾಹಿನಿಯ ತೆಲುಗು ಚಲನಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ನಟ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜ್ ಬಯೋಪಿಕ್ ನಲ್ಲಿ ನಟಿಸುವುದಾಗಿ ಘೋಷಿಸಿಕೊಂಡಿದ್ದು, ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ಆರಂಭಗೊಂಡಿದೆ. ಕನ್ನಡಿಗರ ಪಾಲಿಗೆ ಶಿವಾಜಿ ದಾಳಿಕೋರ. ಕರ್ನಾಟಕಕ್ಕೆ ಶಿವಾಜಿಯ ಕೊಡುಗೆ ಏನು ಅಂತ ಕನ್ನಡಿಗರು ರಿಷಬ್ ಶೆಟ್ಟಿಗೆ ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿರುವುದು ಕಂಡು ಬಂದಿದೆ. ಹಲವು ಜನರು ಶಿವಾಜಿ ಬಯೋಪಿಕ್ ನಲ್ಲಿ ನಟಿಸುವ ರಿಷಬ್ ಶೆಟ್ಟಿಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂತಾರದಲ್ಲಿ ಗಳಿಸಿದ ಖ್ಯಾತಿಯನ್ನು ಶಿವಾಜಿ ಬಯೋಪಿಕ್ ನಿಂದ ಕಳೆದುಕೊಳ್ಳಬೇಡಿ. ನಮ್ಮ ಮಣ್ಣಿನ ಕಥೆಗಳನ್ನ ಕೊಡಿ ಅಂತ ರಿಷಬ್ ಶೆಟ್ಟಿಗೆ ಮನವಿ ಮಾಡಿದ್ದಾರೆ.