
ರಿಪ್ಪನ್ ಪೇಟೆ: ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆ ಕೋಡೂರು ಬಳಿಯ ಅಮ್ಮನಘಟ್ಟ ಬಸ್ ನಿಲ್ದಾಣವೊಂದರಲ್ಲಿ ಬಂಗಾರದ ಚೈನ್ ಬಿದ್ದಿದ್ದು, ಅದು ಶಿಕ್ಷಕಿಯಾದ ಪಾರ್ವತಿಬಾಯಿಗೆ ಸಿಕ್ಕಿದೆ, ಚಿನ್ನದ ಸರವನ್ನು ಕ್ಷಣ ಮಾತ್ರದಲ್ಲಿ ಸಂಬಂಧಪಟ್ಟ ಪೋಲಿಸ್ ಠಾಣೆಗೆ ಮಾಹಿತಿ ನೀಡಿ ಪಿಎಸ್ಐ ರಾಜುರೆಡ್ಡಿರವರಿಗೆ ಹಸ್ತಾಂತರ ಮಾಡಿದ್ದಾರೆ. ಶಿಕ್ಷಕಿ ಪಾರ್ವತಿ ಬಾಯಿ ಪ್ರಾಮಣಿಕತೆಯನ್ನು ಮೆರೆದಿದ್ದಾರೆ. ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಮಲ್ಲ್ಲಾಪುರದ ಶಿವಕುಮಾರ್ಗೆ ಚಿನ್ನದ ಸರವು ಸೇರಿದೆ ಎಂದು ತಿಳಿದು ಬಂದಿದ್ದು. ಸರವನ್ನು ಶಿವಕುಮಾರ್ಗೆ ಹಿಂದಿರುಗಿಸಲಾಗಿದೆ. ಕೋಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಪ್ರಕಾಶ ಹಾಗೂ ಠಾಣೆಯ ಪೋಲಿಸ್ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಎನ್ನಲಾಗಿದೆ.