
ರಿಪ್ಪನ್ಪೇಟೆ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ.ಎಸ್ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ಪೇಟೆ ಪೋಲಿಸ್ ಠಾಣೆಗೆ ತ-ತ್ಕ್ಷಣದ ಭೇಟಿ ನೀಡಿದ್ದು ಹಾಗೆಯೇ ಹೊಸನಗರ ವ್ಯಾಪ್ತಿಯ 10ನೇ ವಾರ್ಡ್ನ ಅಂಗನವಾಡಿ ಕೇಂದ್ರಕ್ಕೆ ನ್ಯಾಯಾಧೀಶರು ಭೇಟಿ ನೀಡಿದ್ದಾರೆ. ಪೋಲಿಸ್ ಠಾಣೆಯ ಸುತ್ತಮುತ್ತ ಹಾಗೂ ಪ್ರತಿಯೊಂದು ವಿಭಾಗಗಳಿಗೂ ಸ್ವತ ಅವರೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಲಿಸ್ ಠಾಣೆ ಸಬ್ ಇನ್ಸ್ಪಡಕ್ಟರ್ ರಾಜುರೆಡ್ಡಿ ಬಿ ಅವರು ಹಾಜರಿದ್ದರು. ಹಾಗೆಯೇ ಅಂಗವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ನ್ಯಾಯಾಧೀಶರಾದ ಸಂತೋಷ್ ಎಂ.ಎಸ್ ಅವರು ಹೊಸನಗರ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಹಮ್ಮಿಕೊಂಡಿದ್ದ, ಖಾಯಂ ಲೋಕ ಅದಾಲತ್ ಕುರಿತು ಕಾನೂನು ಅರಿವು ಕಾರ್ಯಕ್ರಮಗಳನ್ನು ಉದ್ಘಾಟಿಸಿ ಸಮಾರಂಭ ಕುರಿತು ಮಾತನಾಡಿದರು. ಖಾಯಂ ಲೋಕ್ ಅದಾಲತ್ ಸೇವೆಯ ಉಪಯೋಗಗಳನ್ನು ಸಾರ್ವಜನಿಕರು ಮತ್ತು ಸಾರ್ವಜನಿಕ ಉಪಯುಕ್ತ ಸೇವೆಗಳನ್ನು ನೀಡುವ ಸಂಸ್ಥೆಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.