
ಮಲೆನಾಡಿನಲ್ಲಿ ಮುಂದುವರೆದ ಮಳೆರಾಯನ ಅಬ್ಬರ. ಮಲೆನಾಡ ೫ ತಾಲ್ಲೂಕಿನ ಅಂಗನವಾಡಿಗಳಿಗೆ ರಜೆ ಘೋಷಣೆ. ಎನ್. ಆರ್. ಪುರ, ಕೊಪ್ಪ, ಶೃಂಗೇರಿ, ಕಳಸ, ಹಾಗೂ ಮೂಡಿಗೆರೆ ತಾಲ್ಲಕಿನ ಅಂಗನವಾಡಿಗಳಿಗೆ ಜಿಲ್ಲಧಿಕಾರಿಯಾದ ಮೀನಾ ನಾಗರಾಜ್ರವರು ರಜೆ ಘೋಷಣೆ ಮಾಡಿದ್ದಾರೆ. ಶೃಂಗೇರಿಯ ನೆಮ್ಮಾರು ಬಳಿ ಮತ್ತೆ ಗುಡ್ಡ ಕುಸಿದಿದ್ದು, ಈಗಾಗಲೇ ಹೆದ್ದಾರಿ ಅಧಿಕಾರಿಗಳು, ಪೋಲಿಸರು,ತೆರವು ಕಾರ್ಯಾಚರಣೆ ಆರಂಭಿಸಿದ್ದು ವಾಹನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ನಿರಂತರ ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿ ಮತ್ತೆ ಮತ್ತೆ ಗುಡ್ಡವು ಕುಸಿಯುತ್ತಿದೆ ಎನ್ನಲಾಗಿದೆ.