
ರಾಜ್ಯದಲ್ಲಿ ಈ ವರೆಗಿನ ಮಳೆಯಿಂದಾಗಿ ಪ್ರಮುಖ ಡ್ಯಾಂಗಳ ಭರ್ತಿಗೆ ಕೆಲವೇ ಅಡಿಗಳು ಮಾತ್ರ ಬಾಕಿ ಇದೆ. ಕಳೆದ ಎರಡು ವಾರಗಳಿಂದ ನಿರಂತರವಾಗಿ ಸುರಿದ ಮುಂಗಾರಿನಿಂದ ಪ್ರಮುಖ ಜಲಾಶಯದಲ್ಲಿ ಒಳಹರಿವು ಹಚ್ಚಾಗಿದೆ. ಮುಂದಿನ ತಿಂಗಳು ಹೆಚ್ಚಿನ ಮಳೆಯಾದರೆ ಉಕ್ಕಿ ಹರಿಯುವ ಮಟ್ಟಕ್ಕೆ ನೀರಿನ ಸಂಗ್ರಹವಾಗಿದೆ. ಹಾರಂಗಿ, ಹೇಮಾವತಿ, ಕೃಷ್ಣರಾಜಸಾಗರ ಹಾಗೂ ಕಬಿನಿ ಅಣೆಕಟ್ಟುಗಳು ಶೇಕಡಾ ೯೦ರಷ್ಟು ಭರ್ತಿಯಾಗಿದೆ. ಜಲಾಶಯಗಳಿಂದ ನೀರಿನ ಹೊರ ಹರಿವು ಹೆಚ್ಚಾಗಿದ್ದು, ಕೆಳಭಾಗದ ಗ್ರಾಮಸ್ಥರಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ಕಬಿನಿ ಡ್ಯಾಂ ಕುರಿತು ಕಾವೇರಿ ನೀರಾವರಿ ಇಲಾಖೆ ಸ್ಪಷ್ಟನೆ ನೀಡಿದೆ. ಡ್ಯಾಂನಿಂದ ನೀರು ಚಿಮ್ಮುತಿಲ್ಲ, ಹನಿ ಹನಿಯಾಗಿ ತೊಟ್ಟಿಕ್ಕುತ್ತಿದೆ, ಬಿರುಕುಗಳಿಲ್ಲ ಎಂದಿದ್ದಾರೆ. ಕೆಲವು ಕಿಡಿಗೇಡಿಗಳು ಸುಳ್ಳು ವದಂತಿ ಹಬ್ಬಿಸಿದ್ದಾರೆ. ಜನರು ಹಾಗೂ ರೈತರಿಗೆ ಯಾವುದೇ ರೀತಿಯ ಆತಂಕ ಬೇಡ ಎಂದು ತಿಳಿಸಿದ್ದಾರೆ.