
ದಕ್ಷಿಣ ಕನ್ನಡ: ಕಳೆದ ವರ್ಷ ಈ ಅವಧಿಯಲ್ಲಿ 242.2 ಮಿ.ಮೀ ಮಳೆಯಾಗಿದ್ದು, ಈ ಬಾರಿ 423.1 ಮಿ.ಮೀ ಮಳೆಯಾಗಿದೆ. ಮೂಡಬಿದರೆ ಹಾಗೂ ಮುಲ್ಕಿಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ವರುಣನ ಆರ್ಭಟಕ್ಕೆ ಜಿಲ್ಲೆಯ ಜನಸಾಮಾನ್ಯರು ಮತ್ತು ವಾಹನ ಸವಾರರು ಪರದಾಡುವಂತಾಗಿದೆ. ಹಾಗೆಯೇ ಇದರಿಂದಾಗಿ ಹಲವಾರು ಮನೆಗಳು, 37 ಸೇತುವೆಗಳು ಹಾನಿಗೊಳಗಾಗಿದೆ. ದುರಸ್ತಿ ಕೆಲಸಗಳಿಗೆ ಅನುದಾನದ ಕೊರತೆ ಕಂಡುಬಂದಿದ್ದು. ಜಿಲ್ಲೆಯಲ್ಲಿ ರೆಡ್ ಅಲರ್ಟ ಜಾರಿಯಾದಾಗ ಅಪಾಯದಂಚಿನಲ್ಲಿರುವ ಮನೆಗಳ ನಿವಾಸಿಗಳನ್ನು ಕಾಳಜಿಕೇಂದ್ರ ಹಾಗೂ ಸಂಭಂದಿಕರ ಮನೆಗೆ ಕಳಹಿಸಿಕೊಡುವ ಕಾರ್ಯವನ್ನು ಜಿಲ್ಲಾಡಳಿತ ಮಾಡಿದೆ.