
ವರುಣನ ಆರ್ಭಟದಿಂದಾಗಿ ಹಲವೆಡೆ ಗುಡ್ಡಕುಸಿತ, ಭೂ ಕುಸಿತ ಉಂಟಾಗಿದ್ದು, ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂ ಕುಸಿತ ಉಂಟಾಗಿದೆ. ಭೂ ಕುಸಿತದಿಂದಾಗಿ ವಾಹನ ಸಂಚಾರರು ಪರದಾಡುವಂತಾಗಿದೆ. ಹಾಗೆಯೇ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಬಳಿ ಹಲವೆಡೆ ಭೂಕುಸಿತ ಉಂಟಾಗಿದೆ. ಮರ-ಗಿಡಗಳ ಸಮೇತ ಮಣ್ಣು ರಸ್ತೆಗೆ ಕುಸಿಯುತ್ತಿದೆ. ಮಲೆನಾಡು ಹಾಗೂ ಕರಾವಳಿಯ ಭಾಗದಲ್ಲೂ ಅಧಿಕ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ರಸ್ತೆ ಸಂಚಾರ ಬಂದ್ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಆನೆಗುಂದ ಬಳಿ ಗುಡ್ಡ ಕುಸಿದಿದ್ದು ಒಂದು ಕಡೆಯ ರಸ್ತೆ ಸಂಪೂರ್ಣ ಮುಚ್ಚಿದೆ. ಮಾರ್ಗದ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸಲಾಗಿದ್ದು. ಜನರು ಮುಂದುವರೆದ ವರುಣನ ಆರ್ಭಟದಿಂದಾಗಿ ಆತಂಕಕ್ಕೊಳಗಾಗಿದ್ದಾರೆ.