
ಬೆಟ್ಟದಿಂದ ಬೃಹತ್ ಬಂಡೆಗಳು ಜಾರಿ ಯಡಕುಮೇರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ ರೈಲ್ವೆ ಹಳಿಯ ಮೇಲೆ ಬಿದ್ದಿದ್ದು, ಇದೇ ಮಾರ್ಗದಲ್ಲಿ ನೂರಾರು ಪ್ರಯಾಣಿಕರನ್ನು ಕರೆತರುತ್ತಿದ್ದ ರೈಲೊಂದು ಸಂಚರಿಸುತ್ತಿದ್ದು, ಲೋಕೋ ಪೈಲೆಟ್ ಗೆ ಹಳಿಗಳ ಮೇಲೆ ಬಂಡೆಗಳು ಕಾಣಿಸಿದೆ, ತಕ್ಷಣ ರೈಲನ್ನು ನಿಲ್ಲಿಸಲಾಗಿದೆ. ಇಲ್ಲವಾದರೆ ರೈಲಿನ ಇಂಜಿನ್ ಬಂಡೆಗೆ ಗುದ್ದಿ ಭಾರಿ ಅವಘಡ ಸಂಭವಿಸುವ ಸಾಧ್ಯತೆಯಿತ್ತು. ಬೆಳಗ್ಗೆ ೯.೧೦ ಕ್ಕೆ ಸಂಪೂರ್ಣ ಬಂಡೆಗಳ ತೆರವು ಕಾರ್ಯಾಚರಣೆ ನಡೆದಿದ್ದು ರೈಲುಗಳಿಗೆ ಗಂಟೆಗೆ ೨೦ ಕಿ.ಮೀನಲ್ಲಿ ಸಂಚರಿಸಲು ನಿರ್ಬಂಧ ಹೇರಲಾಗಿದೆ. ಡಾ. ಮಂಜುನಾಥ್ ಕನಮಡಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ನೈಋತ್ಯ ರೈಲ್ವೆ ಹುಬ್ಬಳ್ಳಿ ಅವರು ಪ್ರಕಟಣೆ ಮೂಲಕ ಸಂಚಾರದಲ್ಲಿ ವ್ಯತ್ಯಯಗೊಂಡಿದ್ದ ಎಲ್ಲಾ ರೈಲುಗಳು ಮುಂದಿನ ಪ್ರಯಾಣವನ್ನು ಮುಂದುವರಿಸಿದೆ ಎಂದು ತಿಳಿಸಿದ್ದಾರೆ.