ಕಲಬುರಗಿ : ನವೆಂಬರ್ ೧೩ರಂದು ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥಸಂಚಲನ ನಡೆಸಲು ಅನುಮತಿ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಹೈಕೋರ್ಟ್ ಕಲಬುರಗಿ ವಿಭಾಗೀಯ ಪೀಠ ಚಿತ್ತಾಪುರದಲ್ಲಿ ಆರ್.ಎಸ್.ಎಸ್ ಪಥಸಂಚಲನ ನಡೆಸಲು ಅನುಮತಿ ನೀಡಿದೆ. ಆ ಪ್ರಕಾರವಾಗಿ ಶರತ್ತು ಬದ್ಧ ಮುನ್ನೂರು ಜನ ಕಾರ್ಯಕರ್ತರು ಹಾಗೂ 25 ಬ್ಯಾಂಡ್ ವಾದಕರಿಗೆ ನವೆಂಬರ್ 16 ರ 3:30 ರಿಂದ ಸೂರ್ಯಾಸ್ತದವರೆಗೆ ಅವಕಾಶ ಕಲ್ಪಿಸಲಾಗಿದೆ. ಆರ್.ಎಸ್.ಎಸ್ ವಿರುದ್ಧ ಮಾತಾಡಿದ ಖರ್ಗೇ ಕ್ಷೇತ್ರದಲ್ಲಿ ನಡೆಯುವ ಈ ಪಥಸಂಚಲನ ಆರ್.ಎಸ್.ಎಸ್ಗೆ ಪ್ರತಿಷ್ಠೆಯ ಸಂಕೇತವಾಗಿದೆ.
