
ಹೊಸ ಸಿನಿಮಾ ರಿಲೀಸ್ ಆದ ತಕ್ಷಣ ಸಿನಿಮಾ ಅಭಿಮಾನಿಗಳು ಮೊದಲನೇ ದಿನವೇ ಚಲನಚಿತ್ರವನ್ನು ನೋಡುವ ತವಕದಲ್ಲಿರುತ್ತಾರೆ. ಹೀಗಾಗಿ ಸಿನಿಮಾ ಬರೋದೆ ತಡ ಅಭಿಮಾನಿಗಳ ದಂಡು ಥಿಯೇಟರ್ ನಲ್ಲಿ ಅಭಿಮಾನಿಗಳ ದಂಡು ಜಮಾಯಿಸುತ್ತಾರೆ. ಅದರಲ್ಲೂ ಆ ಸಿನಿಮಾದ ನಟ ನಟಿಯರು ಬಂದರೆ ನೋಡೋದೆ ಬೇಡ. ನೂಕು ನುಗ್ಗಲಿನಿಂದ ನಾ ಮುಂದು ತಾ ಮುಂದೆ ಅಂತ ಅಭಿಮಾನಿಗಳು ಬರುತ್ತಾರೆ. ಅಂತೆಯೇ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿರುವ ಪುಷ್ಪಾ 2 ಸಿನಿಮಾ ರಿಲೀಸ್ ಆಗಿದೆ. ಇದನ್ನು ಯಶಸ್ವಿಯಾಗಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನಿನ್ನೆ ರಾತ್ರಿಯಿಂದಲೇ ಶೋಗಳು ಆರಂಭವಾಗಿದ್ದು, ನಟ ಅಲ್ಲು ಅರ್ಜುನ್ ಸಿನಿಮಾ ನೋಡಲು ಸಂಧ್ಯಾ ಥಿಯೇಟರ್ ಗೆ ಭೇಟಿ ನೀಡಿದ್ದಾರೆ ಈ ವೇಳೆ ನೂಕು ನುಗ್ಗಲಿನಿಂದ ಕಾಲ್ತುಳಿತಕ್ಕೆ ಒಳಗಾಗಿ ರೇವತಿ ಎಂಬ ಯುವತಿ ಸಾವನ್ನಪ್ಪಿದ್ದಾಳೆ. ಇನ್ನು ಇದಕ್ಕೆ ಅಲ್ಲು ಅರ್ಜುನ್ ಚಿತ್ರತಂಡ ಪ್ರತಿಕ್ರಿಯಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡುವುದಾಗಿ ತಿಳಿಸಿದ್ದಾರೆ. ಇಂದು ತೆರೆಕಂಡು ಪುಷ್ಪಾ 2 ಸುಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್, ಸುನೀಲ್, ಡಾಲಿ ಧನಂಜಯ ಸೇರಿದಂತೆ ಹಲವು ಸ್ಟಾರ್ ನಟರಿದ್ದಾರೆ.