
ಶೃಂಗೇರಿ : ಪಟ್ಟಣದ ಮಾನುಗಾರಿನಲ್ಲಿರುವ ಜ್ಞಾನ ಭಾರತೀ ಶಾಲೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಗೆ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಿ ಸಮಾಜದ ವಿವಿಧ ಗಣ್ಯರಿಂದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪಬ್ಲಿಕ್ ಮಿರರ್ ಹಾಗೂ ಜೈಟಿವಿ ಸಂಪಾದಕರು, ಶೃಂಗೇರಿ ಜೆಸಿಐ-2024ರ ಅಧ್ಯಕ್ಷರೂ ಆದ ಹೆಚ್, ಜೆ ರಾಘವೇಂದ್ರರವರೂ ಮಕ್ಕಳಿಗೆ ಬಹುಮಾನ ವಿತರಿಸಿ, ಮಕ್ಕಳಿಗೆ ಪ್ರೋತ್ಸಾಹ ಹಾಗೂ ಉತ್ತೇಜನ ಬರುವಂತೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಸ್ಪರ್ಧೆಯಲ್ಲಿ ಶಾಲೆಯ ಸುಮಾರು 700 ವಿಧ್ಯಾರ್ಥಿಗಳು ಪಾಲ್ಗೊಂಡಿದ್ದು, ಬಹುತೇಕ ಎಲ್ಲಾ ಮಕ್ಕಳು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಾಗೆ ಇದೇ ನವೆಂಬರ್ 29 ರಂದು ಶಾಲೆಯ ವಾರ್ಷಿಕೋತ್ಸವ ಜರುಗಲಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶಂಕರ್ ನಾರಾಯಣ್ ತಿಳಿಸಿದ್ದಾರೆ.