
ಇಂಧನವು ಕೃಷಿ, ಕೈಗಾರಿಕೆ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಆದಾರವಾಗಿದೆ. ವಾಹನಗಳ ಸಂಚಾರಕ್ಕೂ ಪೆಟ್ರೋಲ್ ಹಾಗೂ ಡೀಸೆಲ್ ಅತ್ಯಗತ್ಯವಾಗಿದ್ದು, ಇಂಧನ ಸಂಪತ್ತನ್ನು ಭವಿಷ್ಯ ಪೀಳಿಗೆಗೂ ಉಳಿಯುವಂತೆ ಬಳಸಿ ಕಾಪಾಡಬೇಕು. ತೈಲ ಬೆಲೆಗಳು ಬೇಡಿಕೆಗೆ ಅನುಗುಣವಾಗಿ ಏರಿಳಿಕೆ ಅನುಭವಿಸುತ್ತಿವೆ. ಭಾರತದಲ್ಲಿ 2017ರಿಂದ ಇಂಧನದ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತಿದೆ, ಇದಕ್ಕೂ ಮೊದಲು ಪ್ರತಿ 15 ದಿನಗಳಿಗೆ ಮಾತ್ರ ದರ ಬದಲಾವಣೆ ನಡೆಯುತ್ತಿತ್ತು. ಇತ್ತೀಚಿನ ನಿತ್ಯದ ದರ ಅಪ್ಡೇಟ್ ವ್ಯವಸ್ಥೆಯಿಂದ ವಾಹನ ಸವಾರರಿಗೆ ದೈನಂದಿನ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಮಾಹಿತಿ ಲಭ್ಯವಾಗುತ್ತಿದೆ. ಉದಾಹರಣೆಗೆ, ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ದರ ರೂ.102.92 ಹಾಗೂ ಡೀಸೆಲ್ ದರ ರೂ.90.99 ಆಗಿದ್ದು, ಚೆನ್ನೈ, ಮುಂಬೈ, ಕೊಲ್ಕತ್ತಾದಲ್ಲಿ ಪೆಟ್ರೋಲ್ ದರಗಳು ಕ್ರಮವಾಗಿ ರೂ.100.82, ರೂ.103.50, ರೂ.105.41 ಆಗಿವೆ ಮತ್ತು ಡೀಸೆಲ್ ದರಗಳು ರೂ.92.40, ರೂ.90.03, ರೂ.92.02 ಆಗಿವೆ. ದೆಹಲಿ ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ.94.77 ಮತ್ತು ಡೀಸೆಲ್ ದರ ರೂ.87.67 ಆಗಿದೆ.