
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯಲ್ಲಿ ಲಾರಿ ಪತ್ತೆಯಾಗಿದ್ದು. ಪೆಟ್ರೋಲ್ ಪೈಪ್ ಲೈನ್ ಕೊರೆದು ಸುಮಾರು ಎರಡು ಸಾವಿರ ಲೀಟರ್ ಪೆಟ್ರೋಲ್ ಕಳ್ಳತನ ಮಾಡಲಾಗಿದೆ. ಕಳ್ಳತನದ ಲಾರಿಗೆ ನಂಬರ್ ಪ್ಲೇಟ್ ಕೂಡ ಇಲ್ಲ. ಲಾರಿ ಬಿಟ್ಟು ಪರಾರಿಯಾದ ಪೆಟ್ರೋಲ್ ಕಳ್ಳರು. ಮೂಡಿಗೆರೆ ತಾಲ್ಲೂಕಿನಲ್ಲಿ ಎಲ್ಲೂ ಪೆಟ್ರೋಲ್ ಪೈಪ್ ಲೈನ್ ಕೊರೆದಿಲ್ಲ, ಬೇರೆ ಕಡೆ ಪೈಪ್ ಕೊರೆದು ಪೆಟ್ರೋಲ್ ಕದ್ದು ಸಾಗಿಸುತ್ತಿರೋ ಅನುಮಾನ ವ್ಯಕ್ತವಾಗಿದೆ. ಆರೋಪಿಗಳಿಗಾಗಿ ಬಲೆ ಬೀಸಿದ ಗೋಣಿಬಿಡು ಪೋಲಿಸರು.