
ನವದೆಹಲಿ: ಶೀಘ್ರವಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಬೇಕಾದರೆ ವಾಹನಗಳು ಅತ್ಯವಶ್ಯಕ ಅದರಲ್ಲೂ ಇಂದಿನ ಕಾಲಘಟ್ಟದಲ್ಲಿ ಮಾನವ ವಾಹನಗಳ ಮೇಲೆ ಸಂಪೂರ್ಣ ಅವಲಂಬಿತನಾಗಿದ್ದಾನೆ ಎಂದರೆ ತಪ್ಪಾಗಲಾರದು. ಹೀಗೆ ದಿನನಿತ್ಯ ಓಡಾಡುವ ವಾಹನಗಳಿಗೆ ಪೆಟ್ರೋಲ್ ಡೀಸೆಲ್ ಅತೀ ಅವಶ್ಯಕ. ಹೀಗಾಗಿ ಅಪಾರ ಬೇಡಿಕೆ ಹೊಂದಿರುವ ಇಂಧನ ಶಕ್ತಿಗಳಾಗಿವೆ. ಅಲ್ಲದೆ, ಕಚ್ಚಾತೈಲ ತನ್ನದೇ ಆದ ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿದ್ದು ಅದರ ಬೆಲೆ ಎಂದಿಗೂ ಸ್ಥಿರವಾಗಿರುವುದಿಲ್ಲ. ಸ್ಥಳೀಯ ಕಾರಣಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗುವ ವಿದ್ಯಮಾನಗಳು ಸಾಮಾನ್ಯವಾಗಿ ಇಂಧನ ದರಗಳ ಮೇಲೆ ಪ್ರಭಾವ ಬೀರುತ್ತವೆ. ಆದರೆ ಇದೀಗ ವಾಹನ ಸವಾರರಿಗೆ ಸರ್ಕಾರ ಸಿಹಿಸುದ್ದಿಯೊಂದು ನೀಡಿದ್ದು, ಶೀಘ್ರವೇ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 10ರೂ. ಇಳಿಕೆಯಾಗುವ ಸಾಧ್ಯತೆ ಇದೆ. ವಾಹನಗಳು ನಿಂತರೆ ಜಗತ್ತೇ ನಿಂತೇ ಬಿಡುತ್ತದೆ ಎನ್ನುವಷ್ಟರ ಮಟ್ಟಿಗೆ ಇಂದು ನಾವು ಅವಲಂಬಿತರಾಗಿದ್ದು, ದಿನನಿತ್ಯದ ದೈನಂದಿನ ಅವಶ್ಯಕತೆಗಳಲ್ಲಿ ಇದೂ ಕೂಡ ಒಂದಾಗಿದೆ. ಹೀಗಾಗಿ ತೈಲ ಬೆಲೆ ಇಳಿಕೆ ವಾಹನ ಸವಾರರಿಗೆ ನೆರವಾಗುತ್ತದೆ.