
ಪಡುಬಿದ್ರಿ: ವಿಶ್ವನಾಥ ನಾಯ್ಡು ಎಂಬಾತನು ಹೈದರಾಬಾದ್ನಲ್ಲಿ ಉಚ್ಚಿಲ ಮೂಲದ ಯುವತಿಯೊಂದಿಗೆ ಕಳೆದ ಎರಡು ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದು. ವಿಶ್ವನಾಥ ನಾಯ್ಡು ಯುವತಿಯನ್ನು ಪ್ರೀತಿಸುವುದಾಗಿ ತಿಳಿಸಿ, ಇಬ್ಬರೂ ವಿಚ್ಚೇದನವನ್ನು ನೀಡಿ ವಿವಾಹವಾಗುವ ಬಗ್ಗೆ ಹೇಳಿದ್ದ, ಯುವತಿ ಅದನ್ನು ನಿರಾಕರಿಸಿದ್ದಳು. ಆದ ಕಾರಣ ವಿಶ್ವನಾಥ ನಿನ್ನೆ ಉಚ್ಚಿಲದ ಪಡುಬಿದ್ರಿ ಠಾಣಾ ವ್ಯಾಪ್ತಿಯ ಮಹಿಳೆಯ ಮನೆಗೆ ನುಗ್ಗಿ ಆಕೆಯ ಕತ್ತು ಹಿಸುಕಿ ಹತ್ಯೆ ಮಾಡಲು ಮುಂದಾಗಿದ್ದು, ಸರಿಯಾದ ಸಮಯಕ್ಕೆ ಮನೆಯಲ್ಲಿ ಇದ್ದ ಆಕೆಯ ಪತಿ ಹಾಗೂ ಇತರರು ಬಂದಾಕ್ಷಣ ಆರೋಪಿ ಪರಾರಿಯಾಗಿದ್ದಾನೆ. ಆರೋಪಿಯು ಯುವತಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯನ್ನು ನೀಡಿದ್ದನು.
ಉಚ್ಚಿಲದ ಪಡುಬಿದ್ರಿ ಪಿಎಸ್ಐ ಶಕ್ತಿವೇಲು ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆತನನ್ನು ನ್ಯಾಯಾಲಯ ಬಂಧನಕ್ಕೆ ಒಳಪಡಿಸಿದೆ.