
ಬೆಂಗಳೂರು: ಬೆಂಗಳೂರಿನ ಜೆ.ಪಿ ನಗರದಲ್ಲಿ ಕೃಷ್ಣಮೂರ್ತಿ(81) ಹಾಗೂ ರಾಧಾ(74) ದಂಪತಿಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸಾವಿಗೆ ನಿಖರವಾದ ಕಾರಣ ಲಭ್ಯವಾಗಿಲ್ಲ.
ಸೊಸೆಯು ಮಾಡಿದ ಅಡುಗೆ ಇಷ್ಟವಿಲ್ಲ ಹಾಗೂ ಹೊಂದಾಣಿಕೆ ಇರದ ಕಾರಣಕ್ಕೆ ಮಗನ ಬಳಿ ಬೇರೆ ಮನೆ ಮಾಡಿಕೊಡಲು ಹೇಳಿದ್ದರು. 2021ರಲ್ಲಿ ಮಗನು ಬ್ಯಾಟರಾಯನಪುರದ ವೃದ್ಧಾಶ್ರಮಕ್ಕೆ ಸೇರಿಸಿದ್ದನು. ಹಾಗೆಯೇ 2023 ರಲ್ಲಿ ಪುತ್ರನು ಮತ್ತೆ ತಂದೆ ತಾಯಿಯನ್ನು ವೃದ್ಧಾಶ್ರಮದಿಂದ ಮನೆಗೆ ಹಿಂತಿರುಗಿ ಕರೆ ತಂದನು. ನಂತರವೂ ವೃದ್ಧದಂಪತಿಗಳಿಗೆ ಹೊಂದಾಣಿಕೆಯಾಗದ ಕಾರಣ ಕಳೆದ ತಿಂಗಳು ಮತ್ತೆ ಬನಶಂಕರಿ ನಗರದಲ್ಲಿರುವ ವೃದ್ಧಾಶ್ರಮಕ್ಕೆ ದಂಪತಿಗಳನ್ನು ಸೇರಿಸಿದ್ದ. ಟಿವಿ ನೋಡುವ ವಿಷಯಕ್ಕೆ ದಂಪತಿ ಮಧ್ಯದಲ್ಲಿ ಮನಸ್ತಾಪ ಉಂಟಾಗಿತ್ತು ಎಂದು ವೃದ್ಧಾಶ್ರಮದ ಸಿಬ್ಬಂದಿ ಹೇಳಿದ್ದಾರೆ ಎನ್ನಲಾಗಿದೆ. ವೃದ್ಧ ದಂಪತಿ ಮೊನ್ನೆ ಮುಂಜಾನೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಲಘಟ್ಟಪುರ ಪೋಲಿಸ್ ಠಾಣೆಯಲ್ಲಿ ಅಸ್ವಾಭಿವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆಯಾಗುತ್ತಿದೆ.