
ಎನ್ಆರ್ಪುರ: ಸತತ ಐದನೇ ಬಾರಿ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿಡಿ ರಾಜೇಗೌಡ ಹೈಕೋರ್ಟ್ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾದ ಮಾಜಿ ಶಾಸಕರಾದ ಡಿಎನ್ ಜೀವರಾಜ್ರವರು ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ತಕರಾರು ಅರ್ಜಿಯನ್ನು ಸಲ್ಲಿಸಿದ್ದು, ಆ ಅರ್ಜಿಯನ್ನು ವಜಾಗೊಳಸಬೇಕು ಎಂದು ಶೃಂಗೇರಿ ಕ್ಷೇತ್ರದ ಹಾಲಿ ಶಾಸಕ ಟಿಡಿ ರಾಜೇಗೌಡ ಹೈಕೋರ್ಟ್ಗೆ ಅರ್ಜಿ ಸಲ್ಲಿದ್ದರು. ಆದರೆ ಈ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಇದರಿಂದ ಶಾಸಕ ರಾಜೇಗೌಡರು ಮತ್ತೆ ಹಿನ್ನಡೆಯಾಗಿದೆ. ಮಾಜಿ ಶಾಸಕಾರದ ಡಿಎನ್ ಜೀವ್ರಾಜ್ ಸಲ್ಲಿಸಿದ ರ್ಜಿ ವಜಾಗೊಳಿಸುವಂತೆ ಈ ಹಿಂದೆಯೂ ನಾಲ್ಕು ಬಾರಿ ಶಾಸಕ ರಾಜೇಗೌಡರು ಮನವಿಯನ್ನು ಹೈಕೋರ್ಟ್ಗೆ ಸಲ್ಲಿದ್ದರು ಎನ್ನಲಾಗಿದೆ.