
ಎನ್ಆರ್ಪುರ: ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಲೈನ್ಮ್ಯಾನ್ ಕರೆಂಟ್ ಶಾಕ್ನಿಂದ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲ್ಲೂಕಿನ ಕಡಬಗೆರೆ ಸಮೀಪದ ಹೊನ್ನೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಮೃತನನ್ನು 26 ವರ್ಷದ ಪ್ರವೀಣ ಎಂದು ಗುರುತಿಸಲಾಗಿದೆ.
ಮೂಲತ: ಬಾಗಲಕೋಟೆಯ ಪ್ರವೀಣ್ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೆಸ್ಕಾಂನಲ್ಲಿ ಲೈನ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು. ಇಂದು ಮಧ್ಯಾಹ್ನ ಹೊನ್ನೆಕೊಪ್ಪ ಗ್ರಾಮದಲ್ಲಿ ಕಂಬ ಹತ್ತಿ ವಿದ್ಯುತ್ ಲೈನ್ ದುರಸ್ಥಿ ವೇಳೆ ವಿದ್ಯುತ್ ಶಾಕ್ನಿಂದ ತೀವ್ರ ಅಸ್ವಸ್ತಗೊಂಡಿದ್ದನು. ಕಂಬದಿಂದ ಬಿದ್ದು ಒದ್ದಾಡುತ್ತಿದ್ದ ಪ್ರವೀಣ್ನನ್ನು ಸ್ಥಳೀಯರು ಹಾಗೂ ಇತರೆ ಸಿಬ್ಬಂದಿಗಳು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತೀವ್ರ ವಿದ್ಯುತ್ ಶಾಕ್ನಿಂದ ಅಸ್ವಸ್ಥನಾಗಿದ್ದ ಪ್ರವೀಣ್ ಆಸ್ಪತ್ರೆಗೆ ಬರುವ ಮಾರ್ಗದಲ್ಲಿಯೇ ಸಾವನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಬಾಳೆಹೊನ್ನೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಬಾಳೆಹೊನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.