
ಎನ್.ಆರ್.ಪುರ: ಬಾಳೆಹೊನ್ನೂರಿನ ಕುರುಕುಬಳ್ಳಿ ದೇವಸ್ಥಾನಕ್ಕೆ ಹೋಗುವ ಮಾರ್ಗದ ಹತ್ತಿರ ಓಡಾಡುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಸುಮಾರು ೩೮ಗ್ರಾಂನ ಚಿನ್ನದ ಸರವನ್ನು ಬೈಕ್ನಲ್ಲಿ ಬಂದ ಇಬ್ಬರು ಕಳ್ಳರು ಸರವನ್ನು ಅಪಹರಿಸಿದ್ದಾರೆ. ಸರದ ಅಂದಾಜು ಮೊತ್ತ ೩.೫೦ ಲಕ್ಷ ರೂಪಾಯಿಯಾಗಿದ್ದು. ಆ ಮಹಿಳೆಯು ಸರ ಗಳ್ಳರನ್ನು ಪತ್ತೆ ಹಚ್ಚುವಂತೆ ದೂರು ನೀಡಿದ್ದಾರೆ. ಅಂತೆಯೇ ಈ ಪ್ರಕರಣಕ್ಕೆ ಸಂಭಂದಿಸಿದಂತೆ ಕೊಪ್ಪ ಡಿವೈಎಸ್ಪಿ ಅವರು ವಿಶೇಷ ತಂಡವೊಂದನ್ನು ರಚಿಸಿ, ಸರಿ ಸುಮಾರು ೬೦ ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಪರಿಶೀಲಿಸಿದಾಗ ಆರೋಪಿಗಳ ಸುಳಿವು ತಿಳಿದು ಬಂದಿದ್ದು. ಶಿವಮೊಗ್ಗ ಜಿಲ್ಲೆಯ ಸಾಗರದ ಚಿಪ್ಸ್ ವ್ಯಾಪಾರಿ ಸಾಗರ್(೩೦) ಹಾಗೂ ಮತ್ತೋರ್ವ ಭದ್ರ್ರಾವತಿಯ ಹೊಳೆಹೊನ್ನೂರು ಮಾರಶೆಟ್ಟಿಹಳ್ಳಿ ರಾಕೇಶ್(೨೭) ಆರೋಪಿಗಳೆಂದು ತಿಳಿದು ಬಂದಿದ್ದು, ಇವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸರಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳಲ್ಲೂ ಸರವನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಪೋಲಿಸರು ಇವರಿಂದ ಕಳ್ಳತನವಾದ ಬೈಕ್, ದುಡ್ಡು ಹಾಗೂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.