ನವದೆಹಲಿ: ಶ್ರೀನಗರದ ನೌಗಮ್ ಪೋಲೀಸ್ ಠಾಣೆಯಲ್ಲಿ ಸಂಭವಿಸಿದ ಮಧ್ಯರಾತ್ರಿ ಸ್ಫೋಟ ಕಾಶ್ಮೀರದೆಲ್ಲೆಡೆ ಭೀತಿಯ ಅಲೆ ಎಬ್ಬಿಸಿದೆ. ಫರಿದಾಬಾದ್ನಲ್ಲಿ ವಶಪಡಿಸಿಕೊಂಡ ಭಯೋತ್ಪಾದಕ ಮಾಡ್ಯೂಲ್ಗೆ ಸಂಬಂಧಿಸಿದ ಸ್ಫೋಟಕಗಳ ಮಾದರಿಗಳನ್ನು ಸಂಗ್ರಹಿಸುತ್ತಿದ್ದಾಗ ಈ ದೊಡ್ಡ ಮಟ್ಟದ ಸ್ಫೋಟ ಸಂಭವಿಸಿದ್ದು, ಠಾಣೆಯ ಒಳಭಾಗ ಕ್ಷಣಗಳಲ್ಲಿ ನಾಶಕ್ಕೊಳಗಾಯಿತು. ಈ ದುರಂತದಲ್ಲಿ ಹಲವರು ಮೃತಪಟ್ಟಿದ್ದು, ಅನೇಕರಿಗೆ ಗಂಭೀರಗಾಯಗಳಾಗಿವೆ. ಸ್ಫೋಟದ ತೀವ್ರತೆಗೆ ಕಟ್ಟಡದ ಗೋಡೆಗಳು ಕುಸಿದು ಬಿದ್ದಿದ್ದು, ಸುತ್ತಲಿನ ಪ್ರದೇಶಕ್ಕೂ ಹಾನಿಯಾಗಿದೆ. ಘಟನೆ ಸಂಭವಿಸಿದ ತಕ್ಷಣ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ತನಿಖಾಧಿಕಾರಿಗಳು ಘಟನೆಯ ನಿಖರ ಕಾರಣ ಪತ್ತೆ ಹಚ್ಚಲು ಗಂಭೀರ ಪರಿಶೀಲನೆಯನ್ನು ಆರಂಭಿಸಿದ್ದಾರೆ.
