
ನಮ್ಮ ದಡಿಮೆಯ ಲಾಭದ ಸ್ವಲ್ಪ ಭಾಗವನ್ನು ದಾನ ದೇಣಿಗೆ ಸಮಾಜಕ್ಕೆ ನೀಡುವುದರಿಂದ ಆತ್ಮತೃಪ್ತಿ ಮತ್ತು ನೆಮ್ಮದಿಯ ಋಣ ನಮ್ಮದಾಗಿರುತ್ತದೆ ಎಂದು ಉನ್ನತ ಶಿಕ್ಷಣ ಪರಿಷತ್ ನಿವೃತ್ತ ಅಧಿಕಾರಿ ಡಾ. ಎಂ ಜಯಪ್ಪ ಹೇಳಿದರು.
ಚನ್ನಗಿರಿ ತಾಲ್ಲೂಕು ಸಂತೆ ಬೆನ್ನೂರು ಪಟ್ಟಣದ ಕೆಪಿಎಸ್ ಪಿಯು ಕಾಲೆಜಿನಲ್ಲಿ ಶುಕ್ರವಾರ ಬೆಂಗಳೂರಿನ ರಾಜಮನೆ ಫೌಂಡೇಶನ್ನಿಂದ ಎಲ್ಕೆಜಿ ಯಿಂದ ಪಿಯು ಕಾಲೇಜಿನ ೧೧೦೦ ಮಕ್ಕಳಿಗೆ ಉಚಿತ ನೋಟ್ಬುಕ್ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಜೀವನದ ಸಮಾಧಿಯಿಂದ ಪ್ರತಿಫಲ ಪಡೆಯಲು ಶಿಕ್ಷಣದ ಜ್ಞಾನ ಅವಶ್ಯಕವಾಗಿದೆ. ಜೀವನದಲ್ಲಿ ಶ್ರದ್ದೆಯಿಂದ ದುಡಿಮೆಯ ಶ್ರಮವನ್ನು ಸಾರ್ಥಕ ಪಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಇಂತಹ ಸಾರ್ಥಕತೆಯ ಪ್ರತಿಫಲವನ್ನು ತಣಿಗೆರೆ ಗ್ರಾಮದ ರಾಜಮನೆ ಪೌಂಡೇಶನ್ ನಿರ್ಮಾತೃ ಸಣ್ಣ ರಾಜಮನೆ ಅವರು ಸಮಾಜಕ್ಕೆ ಕೊಡುಗೆ ನೀಡಿ ಶೈಕ್ಷಣಿಕ ಬಡ ಮಕ್ಕಳಿಗೆ ಸೌಕರ್ಯ ವಂಚಿತರಿಗೆ ತನ್ನ ದುಡಿಮೆಯ ಒಂದಷ್ಟು ಲಾಭವನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಫೌಂಡೇಶನ್ ಪ್ರತಿನಿದಿ ಸಂತೋಷ್ ರಾಜಮನೆ ಮಾತನಾಡಿ ಸತತ ೧೧ ವರ್ಷಗಳಿಂದ ಫೌಂಡೇಶನ್ನಿಂದ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ಬುಕ್ ನೀಡುತ್ತಾ ಬಂದಿದ್ದು ಈ ವರ್ಷನೂ ೪೦ ಸಾವಿರ ನೋಟ್ಬುಕ್ಗಳನ್ನು ನೀಡುತ್ತಿದ್ದೇವೆ. ಮಕ್ಕಳು ಇದರ ಸದುಪಯೋಗ ಪಡೆದು ಶೈಕ್ಚಣಿಕ ಸಾಧನೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಗೊಲ್ಲರಹಳ್ಳಿ ಪ್ರಭು, ಪ್ರಾಂಶುಪಾಲರಾದ ಯಶೋಧ, ಮಹಮದ್ ವಿನಸ್, ಹೆಚ್ ಎಂ ರವಿ, ಪಾಪಯ್ಯ, ಎಂ ಬಿ ನಾಗರಾಜ್, ದ್ಯಾಮೇಜ್, ಚಿರತೆ ನಾಗರಾಜ್, ಹಾಗೂ ಶಿಕ್ಷಣ ವೃಂದ ಉಪಸ್ಥಿತರಿದ್ದರು.