
ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಿ ಎಂದು ಕೋರ್ಟ್ ಸೂಚನೆ ನೀಡಿದ್ದು, ಎಲೆಕ್ಷನ್ ಮಾಡಿದ್ರೆ ಏನಾಗುತ್ತೋ ಎಂದು ಸರ್ಕಾರಕ್ಕೆ ಆತ್ಮವಿಶ್ವಾಸವೇ ಇಲ್ಲ. 3 ವರ್ಷ ಎಷ್ಟು ಆಗುತ್ತೋ ಅಷ್ಟು ದುಡ್ಡು ಮಾಡಿಕೊಳ್ಳೋಕೆ ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಮೈಸೂರಲ್ಲಿ ಸಾಧನಾ ಸಮಾವೇಶ ಮಾಡಿದ್ದು. ರಾಜ್ಯದಲ್ಲಿ ಏನು ಸಾಧನೆ ಆಗಿದೆ ಅಂತ ಕಾಂಗ್ರೆಸ್ಸಿಗರೇ ಉತ್ತರ ಕೊಡಬೇಕಿದೆ ಎಂದು ತಿಳಿಸಿದ್ದಾರೆ.
ಸಿಎಂ ಕುರ್ಚಿ ಬಗ್ಗೆ ಯಾವುದೇ ಒಳ ಒಪ್ಪಂದ ಇಲ್ಲ, ನಾನೇ 5 ವರ್ಷ ಸಿಎಂ ಅಂತಾರೆ. ರಾಜ್ಯದ ಅಭಿವೃದ್ಧಿ, ಜನರ ಕಷ್ಟಕ್ಕಿಂತ ಇವರಿಗೆ ಸಿಎಂ ಕುರ್ಚಿ ಕಿತ್ತಾಟವೇ ಮುಖ್ಯವಾಗಿದೆ ಎಂದು ಹೇಳಿದ್ದಾರೆ. ಸಿಎಂ ಗೆ ಕುರ್ಚಿ ಉಳಿಸಿಕೊಳ್ಳಬೇಕು ಹಾಗೆಯೇ ಡಿಸಿಎಂಗೆ ಸಿಎಂ ಕುರ್ಚಿ ಬೇಕು, ಮತ್ತೊಬ್ಬರಿಗೆ ಅಧ್ಯಕ್ಷರ ಕುರ್ಚಿ ಮೇಲೆ ಕಣ್ಣು. ಈ ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ ಎಂದು ನಿಖಿಲ್ ಕುಮಾರ ಸ್ವಾಮಿ ತಿಳಿಸಿದ್ದಾರೆ.
2 ವರ್ಷಗಳ ಇವರ ಆಡಳಿತದ ವೈಖರಿ ನೋಡಿ ಜನ ಚರ್ಚೆ ಮಾಡಲು ಶುರು ಮಾಡಿದ್ದಾರೆ ಎಂದು ಗುಡುಗಿದ್ದಾರೆ.