
ಶಿವಮೊಗ್ಗ: ಹಳೆಯ ಬೊಮ್ಮನಕಟ್ಟೆ ಬಡಾವಣೆ ಮೊದಲನೇ ಕ್ರಾಸ್ ನಿವಾಸಿಯಾದ ಅವಿನಾಶ್ ಬರ್ಭರ ಹತ್ಯೆಯಾಗಿದ್ದು, ಬೊಮ್ಮನಕಟ್ಟೆ ಬಡಾವಣೆಯ ಕೆರೆ ಏರಿಯ ಮೇಲೆ ಶವ ಪತ್ತೆಯಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಮನೆಯಲ್ಲಿದ್ದ ಅವಿನಾಶ್ ರಾತ್ರಿ ಹೊತ್ತು ಹೊರಗೆ ಹೋಗಿದ್ದ, ನಂತರ ಮನೆಗೆ ಹಿಂತಿರುಗಿ ಬರಲಿಲ್ಲ ಎನ್ನಲಾಗಿದೆ. ಈತ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದ ಎಂಬ ಮಾಹಿತಿ ತಿಳಿದು ಬಂದಿದೆ. ಹಳೆಯ ವೈಮನಸ್ಸು ಕೊಲೆಗೆ ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರ ತನಿಖೆಯಿಂದಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.