
ಉಡುಪಿ: ಖ್ಯಾತ ಯಕ್ಷಗಾನ ಹಾಸ್ಯ ಕಲಾವಿದರಾದಂತಹ ಮುಖ್ಯಪ್ರಾಣ ಕಿನ್ನಿಗೋಳಿ ರವರು ಶನಿವಾರದಂದು ವಿಧಿವಶರಾಗಿದ್ದಾರೆ. ಅವರ ಸ್ವಗೃಹ ಉದಯಗಿರಿ, ಗೊಳಿಜೋರದಲ್ಲಿ ರವಿವಾರ ಮುಂಜಾನೆ 10 ಗಂಟೆಯಿಂದ 12 ಗಂಟೆಯ ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ತದನಂತರ ಅಂತಿಮ ವಿಧಿ ವಿಧಾನವನ್ನು ನೆರೆವರೆಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮುಖ್ಯಪ್ರಾಣರವರು ೮ನೇ ತರಗತಿವರೆಗೆ ವಿದ್ಯಾಸವನ್ನು ನಡೆಸಿದ್ದು, ಅಗಾಧ ಪ್ರೌಢಿಮೆಯನ್ನು ಹೊಂದಿದ್ದರು. ಯಕ್ಷಗಾನ ಮೇಳದಲ್ಲಿ ಪ್ರಧಾನ ಕಲಾವಿದರಾಗಿ 55 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ತೆಂಕು ತಿಟ್ಟಿನ ಹೆಸರಾಂತ ಹಾಸ್ಯಗಾರ ಮಿಜಾರು ಅಣ್ಣಪ್ಪರವರ ಮಾರ್ಗದರ್ಶನದಲ್ಲಿ ಪಾತ್ರಾಭಿನಯ ಪಡೆದುಕೊಂಡಿದ್ದರು. ಇವರ ಪಾತ್ರ ನಿರ್ವಹಣೆಗೆ ಹಲವು ಪುರಸ್ಕಾರಗಳು ಲಭಿಸಿವೆ.