
ಮೂಡುಬಿದರೆ: ಕೌಟುಂಬಿಕೆ ಸಮಸ್ಯೆ ಸಂಬಂಧ ಮೂಡುಬಿದರೆ ಪೋಲಿಸ್ ಠಾಣೆಗೆ ತೋಡಾರು ಬಳಿಯ ವಿವಾಹಿತ ಮಹಿಳೆಯೋರ್ವರು ದೂರ ನೀಡಿದ್ದು, ಈ ಸಂಬಂಧ ಪತಿ ಹಾಗೂ ಪತ್ನಿಯನ್ನು ಪೋಲಿಸ್ ಠಾಣೆಗೆ ಕರೆಸಿ ಮಧ್ಯಸ್ಥಿಕೆ ಮಾಡಿ ಪ್ರಕರಣವನ್ನು ಇತ್ಯರ್ಥ ಮಾಡಲಾಗಿತ್ತು. ಆದರೆ ದೂರಿನ ಪ್ರತಿಯಲ್ಲಿ ಮಹಿಳೆಯ ಫೋನ್ ನಂ ನ್ನು ತೆಗೆದ ಪೋಲಿಸ್ ಸಿಬ್ಬಂದಿ ಆಕೆಯೊಂದಿಗೆ ಅಶ್ಲೀಲವಾಗಿ ಮಾತನಾಡಿ ಹಾಗೂ ಸಂದೇಶವನ್ನು ರವಾನಿಸಿದ್ದಾನೆ. ಆತನ ಧ್ವನಿಯನ್ನು ರೆಕಾರ್ಡ್ ಮಾಡಿ ದಾಖಲೆ ಸಮೇತವಾಗಿ ಸೆಪ್ಟೆಂಬರ್ ೦೧ರಂದು ಮೇಲಾಧಿಕಾರಿಗೆ ದೂರು ನೀಡಿದ್ದಾರೆ. ಮೇಲಾಧಿಕಾರಿ ಆದೇಶದಂತೆ ಪೋಲಿಸ್ ಸಿಬ್ಬಂದಿಯು ಕೊಪ್ಪಳದ ಶಾಂತಪ್ಪನನ್ನು ಪ್ರಕರಣ ದಾಖಲಾಗಿದ್ದು, ಸೇವೆಯಿಂದ ಅಮಾನತು ಮಾಡಲಾಗಿದೆ. ಪೋಲಿಸ್ ನಿರೀಕ್ಷರಾದ ಸಂದೇಶ್ ಪಿ.ಜಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.