
ಮೂಡಿಗೆರೆ: ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆಯ ಅವಾಂತರದಿಂದಾಗಿ ಮನೆಯ ಗೋಡೆ ಗ್ಯಾರೇಜಿಗೆ ಬಿಟ್ಟಿದ ಕಾರಿನ ಮೇಲೆ ಬಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತವೊಂದು ಪಾರಾದ ಘಟನೆ ಮೂಡಿಗೆರೆ ಪಟ್ಟಣದ ಹೊರವಲಯದ ಗಂಗನಮಕ್ಕಿಯಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ದರುಂತವು ತಪ್ಪಿದ್ದು. ಗೋಡೆ ಕುಸಿದ ಪರಿಣಾಮ ಎರಡು ಮನೆ, ಎಲೆಕ್ಟ್ರಿಕ್ ಶಾಪ್, ಕಾರು ಸಂಪೂರ್ಣ ಜಖಂಗೊಂಡಿದೆ. ಈ ಘಟನೆಯು ಮೂಡಿಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.