
ಮೂಡಿಗೆರೆ: ಎರಡು ವರ್ಷದ ಹಿಂದೆ ಮದುವೆಯಾಗಿದ್ದ 22 ವರ್ಷದ ಪೂಜಾ ಮುಸ್ಲಿಂ ಯುವಕನ ಜೊತೆ ಓಡಿಹೋದ ಘಟನೆಯು ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದ್ದು. ಮೂಡಿಗೆರೆ ತಾಲ್ಲೂಕು ಬೂದಿಮುಚ್ಚಿದ ಕೆಂಡದಂತಾಗಿದೆ. ಆಶಿಕ್ ಎಂಬ ಯುವಕನ ಜೊತೆ ಎಸ್ಕೇಪ್ ಆಗಿದ್ದ ಪೂಜಾ. ನಾಪತ್ತೆಯಾದ ಮಹಿಳೆಯ ಪತಿ ಪೋಲಿಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ದೂರಿನನ್ವಯ ಕಾರ್ಯಾಚರಣೆ ನಡೆಸಿ ಮಹಿಳೆಯನ್ನ ಪತ್ತೆ ಮಾಡಿರುವ ಪೋಲಿಸರು. ಪೋಲಿಸ್ ಠಾಣೆಯ ಮುಂದೆ ಹಿಂದೂ ಸಂಘಟನೆಯ ಮುಖಂಡರು ಹಾಗೂ ಗ್ರಾಮಸ್ಥರು ಜಮಾಯಿಸಿದ್ದರು. ಪೋಲಿಸ್ ಠಾಣೆಯ ಗೇಟ್ ಹಾಕಿದ್ದಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಏಕಾಏಕಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ನಡೆಸಿದ ಹಿಂದೂ ಮುಖಂಡರು. ರಸ್ತೆ ತಡೆ ನಡೆಸಿದ ಸಂಘಟಕರು – ಗ್ರಾಮಸ್ಥರ ಮನ ಓಲೈಸಲು ಪೋಲಿಸರು ಹರಸಹಾಸ ಪಡುವಂತಾಯಿತು. ಠಾಣೆಯ ಮುಂಭಾಗಕ್ಕೆ ಬಿಡುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದರು. ಮುಸ್ಲಿಂ ಯುವಕನ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಕುಟುಂಬಸ್ಥರು ಹಾಗೂ ಹಿಂದೂ ಸಂಘಟನಾಕಾರರು. ಬಣಕಲ್ ಪೋಲಿಸ್ ಠಾಣೆಯ ಮುಂದೆ ಭಾರಿ ಪ್ರತಿಭಟನೆ ನಡೆಸಲಾಗಿತ್ತು ಎನ್ನಲಾಗಿದೆ.