
ಮೂಡಿಗೆರೆ: ಮೂಡಿಗೆರೆ ತಾಲ್ಲೂಕಿನ ಬಣಕಲ್ ಪ್ರೌಢಾ ಶಾಲೆಯಲ್ಲಿ ಲಾಸ್ಟಬೆಂಚ್ ಸ್ಟೂಡೆಂಟ್ ಹೆಸರಿಗೆ ಮಂಗಳ ಹಾಡಿದ್ದು. ಕಾಫಿ ನಾಡಿನಲ್ಲಿ ಹೊಸ ಮಾದರಿಯ ತರಗತಿಯನ್ನು ಆರಂಭಿಸಲಾಗಿದೆ. ೮ನೇ ತರಗತಿಗೆ ವಿದ್ಯಾರ್ಥಿಗಳನ್ನು ಅರ್ಧವೃತ್ತಾಕಾರದಲ್ಲಿ ಕೂರಿಸಿ ಬೋಧನೆ ಆರಂಭ ಮಾಡಿದ್ದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಮೂಡಿಸಲು ಲಾಸ್ಟ್ ಬೇಂಚ್ ಟು ಫಸ್ಟ್ ಬೇಂಚ್ ಮಾದರಿಯಲ್ಲಿ ಕುಳ್ಳಿರಿಸಿದ್ದಾರೆ. ಶಿಕ್ಷಕರು ಎಲ್ಲಾ ಮಕ್ಕಳ ಮೇಲೂ ಗಮನ ಹರಿಸಲು ಇದು ಉಪಯುಕ್ತವಾಗಿದೆ.
ಮಕ್ಕಳು ಶೈಕ್ಷಣಿಕ ಚಟುವಟಿಕೆಯಲ್ಲಿ ಭಾಗಿಯಾಗಿ ಚರ್ಚೆ, ಗ್ರಹಿಕೆಗೆ ಈ ಮಾದರಿಯು ಅನುಕೂಲಕರವಾಗಿದೆ. ಹೊಸ ಪರಿಕಲ್ಪನೆಯ ತರಗತಿಗೆ ಪೋಷಕರು ಹಾಗೂ ಮಕ್ಕಳಲ್ಲಿ ಹುಮ್ಮಸ್ಸು ತುಂಬಿದೆ.