
ಚಿಕ್ಕಮಗಳೂರು: ಮಲೆನಾಡಲ್ಲಿ ಮುಂದುವರಿದ ಗಾಳಿ-ಮಳೆ ಅಬ್ಬರ. ಮೂಡಿಗೆರೆ ತಾಲ್ಲೂಕಿನ ಬೈದುವಳ್ಳಿ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಸೇತುವೆ ಮುಳುಗಿ ಜನರು ಪರದಾಡುವಂತಾಗಿದೆ. ನೀರಿನ ಏರಿಕೆಯಿಂದಾಗಿ ಎರಡು ಗ್ರಾಮದ ಸಂಪರ್ಕ ಕಡಿತವಾಗಿದೆ. ಹೇಮಾವತಿ ನದಿಯು ಮೈದುಂಬಿ ಹರಿಯುತ್ತಿದ್ದು, ಅಡಿಕೆ ಹಾಗೂ ಕಾಫಿ ತೋಟಗಳಿಗೆ ನೀರು ನುಗ್ಗಿದೆ. ಮೂಡಿಗೆರೆ ತಾಲ್ಲೂಕಿನ ಕೆಸವಳಲು ಕೂಡಿಗೆ ಸಂಗಮ ಕೂಡ ಭರ್ತಿಯಾಗಿದ್ದು, ಇದು ನೂರಾರು ಭಕ್ತರು ದೃಷ್ಠಿ ತೆಗೆಸುವ ಸ್ಥಳವಾಗಿದೆ. ನಿರಂತರ ಮಳೆಗೆ ಮಲೆನಾಡಿನ ಜನರು ಕಂಗಾಲಾಗಿದ್ದಾರೆ.