ವರ್ಷದ ಕೊನೆಯ ’ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದುಬೈನಲ್ಲಿ ಕನ್ನಡ ಶಾಲೆ ಹುಟ್ಟು ಹಾಕಿದ ಕನ್ನಡಿಗರ ಪ್ರಯತ್ನವನ್ನು ಶ್ಲಾಘಿಸಿ, “ಬೆಳೆಯುತ್ತಿರುವ ತಂತ್ರಜ್ಞಾನ ಜಗತ್ತಿನಲ್ಲಿ ತಮ್ಮ ಮಕ್ಕಳು ಕನ್ನಡ ಭಾಷೆಯನ್ನು ಮರೆಯುತ್ತಿದ್ದಾರೆ”. ದುಬೈ ಕನ್ನಡಿಗರ ಭಾಷಾಭಿಮಾನ ಎಲ್ಲರಿಗೂ ಮಾದರಿಯಾಗಬೇಕು. ಇದೇ ಕನ್ನಡ ನಾಡು-ನುಡಿ, ನಮ್ಮ ಹೆಮ್ಮೆ, ಎಂದು ವಿವರಿಸಿದರು. ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನ ‘ಐಐಎಸ್ಸಿ ಗೀತಾಂಜಲಿ’ ಕಾರ್ಯಕ್ರಮ ಬಗ್ಗೆಯೂ ಪ್ರಸ್ತಾಪಿಸಿ ”ಈ ಆವರಣದಲ್ಲಿ ವಿಜ್ಞಾನವನ್ನು ಕಲಿಸುವುದು ಮಾತ್ರವಲ್ಲದೇ ವಿದ್ಯಾರ್ಥಿಗಳಲ್ಲಿಏಕಾಗ್ರತೆ ಹೆಚ್ಚಿಸಲು ಸಂಗೀತ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ. ಕ್ಯಾಂಪಸ್ ಸಾಂಸ್ಕೃತಿಕ
ಕೇಂದ್ರವಾಗಿಯೂ ಹೊರಹೊಮ್ಮಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ”ಫ್ರಾನ್ಸ್ ವಸ್ತು ಸಂಗ್ರಹಾಲಯದಲ್ಲಿಪತ್ತೆಯಾಗಿರುವ ಬಾರಾಮುಲ್ಲಾದ ಮೂರು ಬೌದ್ಧ ಸ್ತೂಪಗಳ ಚಿತ್ರಗಳು ಜಮ್ಮು ಮತ್ತು ಕಾಶ್ಮೀರದ ಎರಡು ಸಾವಿರ ವರ್ಷಗಳ ಗತವೈಭವಕ್ಕೆ ಸಾಕ್ಷಿಯಾಗಿದೆ,” ”ಫ್ರಾನ್ಸ್ ವಸ್ತು ಸಂಗ್ರಹಾಲಯದಲ್ಲಿಪತ್ತೆಯಾಗಿರುವ ಬಾರಾಮುಲ್ಲಾದ ಮೂರು ಬೌದ್ಧ ಸ್ತೂಪಗಳ ಚಿತ್ರಗಳು ಜಮ್ಮು ಮತ್ತು ಕಾಶ್ಮೀರದ ಎರಡು ಸಾವಿರ ವರ್ಷಗಳ ಗತವೈಭವಕ್ಕೆ ಸಾಕ್ಷಿಯಾಗಿದೆ,” ಎಂದು ಬಣ್ಣಿಸಿದರು. ಈ ಹಿಂದೆಯು ಕೂಡ ಕರ್ನಾಟಕದ ಹಲವು ವಸ್ತು, ಸ್ಥಳಗಳನ್ನು ’ಮನ್ ಕಿ ಬಾತ್’ನಲ್ಲಿ ಸ್ಮರಿಸಿದ್ದಾರೆ.
