ಬಾಳೆಹೊನ್ನೂರು: ಇಂಡಿಯನ್ ಪೆಪ್ಪರ್ ಲೀಗ್ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಹಲಸೂರಿನ ಶಬಾನ್ ರಂಜಾನ್ ಎಸ್ಟೇಟ್ನಲ್ಲಿ ೨೦೨೫ರ ಅಂತಿಮ ತರಬೇತಿ ಕಾರ್ಯಗಾರದ ಸಮಾರಂಭ ಯಶಸ್ವಿಯಾಗಿ ನೆರವೇರಿತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಟಿ.ಡಿ ರಾಜೇಗೌಡ, ತಮ್ಮ ತೋಟಗಳಲ್ಲಿ ಮಿಶ್ರಬೆಳೆ ಅಳವಡಿಸಿ ಅಡಿಕೆಗೆ ಭಾದಿಸುತ್ತಿರುವ ರೋಗದ ಬಗ್ಗೆ ವಿಜ್ಞಾನಿಗಳಿಗೆ ಪ್ರಶ್ನಿಸುವ ಹಾಗೂ ರೋಗದ ಕಾರಣ ತಿಳಿದುಕೊಳ್ಳುವ ಹಕ್ಕು ನಿಮಗಿದೆ ಎಂದರು. ಕಾಲುಮೆಣಸು ಉತ್ಪಾದನೆಯ ಬಗ್ಗೆ ಸುಳ್ಳು ವರದಿ ನೀಡಿರುವ ಸಾಂಬಾರು ಪದಾರ್ಥಗಳ ಅಭೀವೃದ್ಧಿ ಮಂಡಳಿ ವಿರುದ್ಧ ರೈತರು ಪ್ರತಿಭಟಿಸಬೇಕು, ಅಂತೆಯೇ ತೋಟದ ಮಾಲೀಕರು ಉತ್ತಮ ಬೇಲಿ ನಿರ್ಮಾಣ, ಬೆಳೆಯ ಗುಣಮಟ್ಟ ನೀರು, ಮಣ್ಣು ಹಾಗೂ ಕಾರ್ಮಿಕರ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹಲಸೂರು ಕಾಫಿ ಎಸ್ಟೇಟ್ ಮಾಲೀಕ ಯುವರಾಜ್ ತಿಳಿಸಿದರು. ಕೃಷಿ ತಾಂತ್ರಿಕ ಸಲಹೆಗಾರ ಸುನಿಲ್ ತಾಮಗಾಳೆ, ಕಾಳು ಮೆಣಸಿಗೆ ತುಂತುರು ನೀರಾವರಿ ನೀಡಬೇಕಾದ ಗೊಬ್ಬರ ಹಾಗೂ ರೋಗದ ಮುನ್ನೆಚ್ಚರಿಕೆ ಬಗ್ಗೆ ರೈತರೊಂದಿಗೆ ಸಂವಾದದಲ್ಲಿ ತಿಳಿಸಿಕೊಟ್ಟರು.
